ಗೋಕಾಕ : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ಕಛೇರಿಯಲ್ಲಿ ಶೋಷಿತರ ಎದೆಯಲ್ಲಿ ಮೊದಲ ಅಕ್ಷರ ಬರೆದು ಅಕ್ಷರದ ಅವ್ವ ಎಂದೇ ಪ್ರಸಿದ್ಧಿ ಪಡೆದ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿಲ್ ಗಾರ್ಡನ್ ಕಛೇರಿಯ ಮ್ಯಾನೇಜರ್ ವಿ ಆರ್ ಪರಸನ್ನವರ, ಸಚಿವರ ಆಪ್ತ ಸಹಾಯಕ ಪಾಂಡು ಮನ್ನಿಕೇರಿ, ಮುಖಂಡರಾದ ವಿವೇಕ ಜತ್ತಿ, ಕಲ್ಲಪ್ಪಾಗೌಡ ಲಕ್ಕಾರ, ಹಿಲ್ ಗಾರ್ಡನ್ ಸಿಬ್ಬಂದಿಗಳಾದ ಪ್ರಹ್ಲಾದ್ ನಾಡಿಗೇರ, ಪಾಂಡು ರಂಗಸುಭೆ, ಸುರೇಶ್ ಮುದ್ದಪ್ಪಗೋಳ, ಮಂಜು ಸನದಿ ಹಾಗೂ ಅನೇಕ ಮುಖಂಡರು ಯುವಕರು ಉಪಸ್ಥಿತರಿದ್ದರು.
Laxmi News 24×7