Breaking News

ರೈತರೇ ಗಮನಿಸಿ : ʻಸರ್ಕಾರಿ ಯೋಜನೆಗಳʼ ಪ್ರಯೋಜನೆ ಪಡೆಯಲು ʻFIDʼ ಹೊಂದುವುದು ಕಡ್ಡಾಯ

Spread the love

ಧಾರವಾಡ : ರಾಜ್ಯಸರ್ಕಾರ ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದು, ಬರ ಘೋಷಿತ ತಾಲ್ಲೂಕುಗಳಲ್ಲಿ ಬೆಳೆನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಎಫ್‍ಐಡಿ ಹೊಂದಿರಬೇಕು ಹಾಗೂ ಎಫ್‍ಐಡಿಯಲ್ಲಿ ರೈತರು ತಮ್ಮ ಹಕ್ಕಿನಲ್ಲಿರುವ ಎಲ್ಲಾ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ಅವರು ತಿಳಿಸಿದ್ದಾರೆ.

 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳೆನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಎಫ್‍ಐಡಿ ಯೊಂದಿಗೆ ತಾವು ಹೊಂದಿರವ ಎಲ್ಲ ಸಾಗುವಳಿ ಜಮೀನುಗಳನ್ನು ನೋಂದಾಣಿ ಮಾಡಿಕೊಂಡಿರಬೇಕು. ಎಫ್‍ಐಡಿ ಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರಧನ ಸೌಲಭ್ಯ ದೊರೆಯುವುದರಿಂದ ರೈತರು ತಮ್ಮ ಎಲ್ಲಾ ಜಮೀನಿನ ಸರ್ವೇನಂಬರ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿನ ಒಟ್ಟು 3 ಲಕ್ಷ ಪ್ಲಾಟ್‍ಗಳ ಪೈಕಿ ಈಗಾಗಲೇ 2.4 ಲಕ್ಷ ಪ್ಲಾಟ್‍ಗಳು ಅಂದರೆ ಶೇ.80 ರಷ್ಟು ಪ್ಲಾಟಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರಿಸಲಾಗಿದೆ. ಮತ್ತು ಸುಮಾರು 60 ಸಾವಿರ ಪ್ಲಾಟ್‍ಗಳು ಅಂದರೆ ಶೇ.20 ರಷ್ಟು ಬಾಕಿ ಇವೆ.

ಧಾರವಾಡ ತಾಲೂಕಿನ 13927, ನವಲಗುಂದ ತಾಲೂಕಿನ 5945, ಹುಬ್ಬಳ್ಳಿ ತಾಲೂಕಿನ 8493, ಕಲಘಟಗಿ ತಾಲೂಕಿನ 12036, ಕುಂದಗೋಳ ತಾಲೂಕಿನ 8848, ಹುಬ್ಬಳ್ಳಿನಗರ ತಾಲೂಕಿನ 6355, ಅಳ್ನಾವರ ತಾಲೂಕಿನ 987 ಮತ್ತು ಅಣ್ಣಿಗೇರಿ ತಾಲೂಕಿನ 3476 ಪ್ಲಾಟ್‍ಗಳು ಎಫ್‍ಐಡಿಯಲ್ಲಿ ಸೇರ್ಪಡೆಯಾಗಿರುವುದಿಲ್ಲ. ಕಾರಣ ಈ ಕೂಡಲೇ ಇನ್ನೂ ಎಫ್‍ಐಡಿ ಮಾಡಿಸದ ರೈತರು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು ಹಾಗೂ ಫ್ರೂಟ್ಸ್ ಐಡಿ ಹೊಂದಿದವರು ತಮ್ಮ ಎಲ್ಲ ಸರ್ವೇನಂಬರಗಳನ್ನು ಎಫ್‍ಐಡಿ ಜೊತೆ ಸೇರಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

ರೈತರು ಎಫ್‍ಐಡಿ ಮಾಡಿಸಿಕೊಳ್ಳಲು ಅವರ ಆಧಾರಕಾರ್ಡ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನುಗಳ ಪಹಣಿ, ತಮ್ಮ ಮೋಬೈಲ್ ಸಂಖ್ಯೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಆಗಿದ್ದಲ್ಲಿ ಅವರ ಜಾತಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಬೇಕು.


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ