Breaking News

ಬಿಎಂಟಿಸಿಯ ಚಾಲಕರ ಮತ್ತು ನಿರ್ವಾಹಕರ ಕೇಸ್​ಗಳು ಖುಲಾಸೆ

Spread the love

ಬೆಂಗಳೂರು:- ಬಿಎಂಟಿಸಿಯ ಚಾಲಕರ ಮತ್ತು ನಿರ್ವಾಹಕರ ಕೇಸ್​ಗಳು ಖುಲಾಸೆ ಮಾಡಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಆದೇಶ ಹೊರಡಿಸಿದ್ದಾರೆ. ಇದು ಇಂದಿನಿಂದಲೇ ಜಾರಿಯಾಗಲಿದೆ.

ಡಿಸ್ಮಿಸ್, ಸಸ್ಪೆಂಡ್, ಐದು ಸಾವಿರ ರುಪಾಯಿ ದಂಡ ಕಟ್ಟಬೇಕಿದ್ದ, ಇನ್ಕ್ರಿಮೆಂಟ್​ ಕಟ್ ಆಗುವ ಭಯದಲ್ಲಿದ್ದ 6960 ನೌಕರರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ತಮ್ಮ ಮಾತು ಕೇಳಲಿಲ್ಲ, ಸಣ್ಣಪುಟ್ಟ ತಪ್ಪುಗಳಿಗೂ ಶಿಕ್ಷೆಗೆ ಒಳಗಾಗಿದ್ದ ಡ್ರೈವರ್ ಮತ್ತು ಕಂಡಕ್ಟರ್​ಗಳ ಕೇಸ್​ಗಳು ವಜಾ ಆಗಿವೆ.

ಚಾಲನೆ ವೇಳೆ ಮೊಬೈಲ್ ಬಳಕೆ, ಟಿಕೆಟ್ ಸರಿಯಾಗಿ ನೀಡದಿರುವುದು, ಗೈರು ಹಾಜರಿ, ಸಂಚಾರಿ ನಿಯಮ ಉಲ್ಲಂಘನೆ, ಬಸ್​ಗಳನ್ನು ಎಲ್ಲಂದರಲ್ಲಿ ನಿಲ್ಲಿಸುವುದು, ಡೋರ್ ಹಾಕದೆ ಬಸ್ ಚಾಲನೆ ಮಾಡಿದ್ದು, ಯೂನಿಫಾರಂ ಹಾಕದೆ ಡ್ಯೂಟಿ ಮಾಡಿರುವುದು ಇಂತಹ ಎಲ್ಲಾ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿದ್ದ ಚಾಲಕರ ಮತ್ತು ನಿರ್ವಾಹಕರ ಕೇಸ್​ಗಳನ್ನು ಬಿಎಂಟಿಸಿ ವಜಾ ಮಾಡಿದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ