ಬೆಂಗಳೂರು:- ಏಳು ಜನರಿಗೆ ಹುಚ್ಚುನಾಯಿ ಕಚ್ಚಿರುವ ಘಟನೆ ಯಲಹಂಕದಲ್ಲಿ ಜರುಗಿದೆ. ಇನ್ನೂ ನಾಯಿ ಕಚ್ಚಿದ ಏಳು ಜನರಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಯಲಹಂಕದ ಕೆಂಪೇಗೌಡ ಸರ್ಕಲ್ ನಿಂದ ಕೊಂಡಪ್ಪ ಲೇಔಟ್ ವರೆಗೂ ಹುಚ್ಚುನಾಯಿ ಕಚ್ಚಿದೆ.
ಇಬ್ಬರು ಬಾಲಕರು, ಒಬ್ಬ ಬಾಲಕಿಗೆ ಗಾಯವಾಗಿದೆ. ಯಲಹಂಕದ ಮೂರು ಜನ ಯುವಕರು ಹಾಗು ಮಣಿಪುರದ ಯುವಕನಿಗೆ ಹುಚ್ಚುನಾಯಿ ಕಚ್ಚಿದೆ.
ಯಲಹಂಕ ಸರ್ಕಾರಿ ಆಸ್ಪತ್ರೆ ವೈದ್ಯರು ಹುಚ್ಚುನಾಯಿ ಕಡಿತಕ್ಕೆ ತಕ್ಕ ಚಿಕಿತ್ಸೆ ನೀಡಿದ್ದಾರೆ. ನೆನ್ನೆ ಸಂಜೆ 4-30ರಿಂದ 6ಗಂಟೆಯೊಳಗೆ ಹುಚ್ಚುನಾಯಿ ದಾಳಿ ನಡೆದಿದ್ದು, ಹುಚ್ಚುನಾಯಿ ದಾಳಿಯಿಂದ ಯಲಹಂಕ ಮತ್ತು ಕೊಂಡಪ್ಪ ಲೇಔಟ್ ಜನ ಭಯಭೀತರಾಗಿದ್ದಾರೆ. ನಾಯಿ ದಾಳಿಯಿಂದ ಇಬ್ಬರು ಬಾಲಕರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ವೇಳೆ ಓರ್ವ ಬಾಲಕನ ಗೋಳು ಕಣ್ಣೀರು ಭರಿಸುವಂತಿತ್ತು. ಕೂಡಲೇ ಸ್ಪಂದಿಸಿ ಚಿಕಿತ್ಸೆ ನೀಡಿದ ಯಲಹಂಕ ಸರ್ಕಾರಿ ವೈದ್ಯರಿಗೆ ಸಾರ್ವಜನಿಕರಿಂದ ಧನ್ಯವಾದ ಹೇಳಲಾಗಿದೆ.
ಬಿಬಿಎಂಪಿ ಸಿಬ್ಬಂದಿ ಹುಚ್ಚುನಾಯಿನ ಹಿಡಿದು ಮತ್ತೆ ಇದೇ ರೀತಿಯ ದಾಳಿಗೆ ಬ್ರೇಕ್ ಹಾಕಬೇಕಿದೆ.
Laxmi News 24×7