ಬೆಂಗಳೂರು:- ಇಂಗ್ಲಿಷ್ ನಾಮಫಲಕಗಳ ವಿರುದ್ಧ ಕರವೇ ಆಕ್ರೋಶ ಮುಂದುವರಿದಿದೆ. RR ನಗರದ ಗೋಪಾಲನ್ ಆರ್ಕೇಡ್ ಮಾಲ್‌ನಲ್ಲಿ ಇಂಗ್ಲೀಷ್ ಫ್ಲೆಕ್ಸ್ ಹರಿದು ಆಕ್ರೋಶ ಹೊರ ಹಾಕಲಾಗಿದೆ.
ಆಟೋದಲ್ಲಿ ಬಂದ ಕರವೇ ಕಾರ್ಯಕರ್ತ ಸ್ಕ್ರೂ ಡ್ರೈವರ್ ನಿಂದ ಫ್ಲೆಕ್ಸ್ ಹರಿದು ಆಕ್ರೋಶ ಹೊರ ಹಾಕಿದ್ದಾರೆ.
ನಾರಾಯಣಗೌಡರು ಅರೆಸ್ಟ್ ಆದ್ರೆ ಹೇಳೋರ್ ಕೇಳೋರ್ ಇಲ್ವಾ.!? ನಾವು ಕಾರ್ಯಕರ್ತರು ಇನ್ನು ಹೊರಗ್ ಇದೀವಿ. ನಾರಾಯಣಗೌಡರು ಅರೆಸ್ಟ್ ಆಗಿರ್ಬೋದು ಕಾರ್ಯಕರ್ತರು ಇನ್ನು ಬದುಕಿದ್ದೀವಿ..!
ಇಂಗ್ಲೀಷ್ ನಾಮಫಲಕ ಚೇಂಜ್ ಮಾಡದಿದ್ರೆ ನಿಮಗೆಲ್ಲಾ ಇದೆ ಅಂತ ಫೇಸ್ಬುಕ್ ಲೈವ್ ಮಾಡಿದ್ದಾರೆ. ನಿಮಗಿದು ವಾರ್ನಿಂಗ್ ಅಂತ ಇಂಗ್ಲೀಷ್ ನಲ್ಲಿದ್ದ ಫ್ಲೆಕ್ಸ್ ಗಳನ್ನ ಹರಿದು ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಕರವೇ ಕಾರ್ಯಕರ್ತ ಕುಮಾರ್ ಎಂಬುವವರಿಂದ ಫ್ಲೆಕ್ಸ್ ಹರಿದುಹಾಕಿ ಆಕ್ರೋಶ ಹೊರ ಹಾಕಿದ್ದಾರೆ.
Laxmi News 24×7