ಧಾರವಾಡ: ಕಾಂಗ್ರೆಸ್ನಲ್ಲಿಯೂ ಅತೃಪ್ತರಿದ್ದಾರೆ. ಆ ಪಕ್ಷದ ಯಾವ ಶಾಸಕರನ್ನೂ ನಾವು ಸಂಪರ್ಕಿಸಿಲ್ಲ. ಹಾಲು ಕುಡಿದು ಸಾಯ್ತಾರೆ ಅಂತ ಗೊತ್ತಿದೆ. ಹೀಗಿರುವಾಗ ಅವರಿಗೆ ವಿಷ ಯಾಕೆ ಕೊಟ್ಟು ಪಾಪ ಕಟ್ಕೊಬೇಕು ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾರ್ಮಿಕವಾಗಿ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ನಲ್ಲಿ 40 ಕ್ಕಿಂತ ಹೆಚ್ಚು ಶಾಸಕರು ಅತೃಪ್ತರಾಗಿದ್ದಾರೆ. ಬಿಆರ್ ಪಾಟೀಲ್, ಬಸವರಾಜ್ ರಾಯರೆಡ್ಡಿ ಅಂಥವರು ಅಸಮಾಧಾನವನ್ನು ಹಾಕಿದ್ದಾರೆ. ಉಳಿದವರು ಹೇಳೋ ಧೈರ್ಯ ಮಾಡುತ್ತಿಲ್ಲ ಎಂದರು.
ಸರ್ಕಾರಕ್ಕೆ ಬರುವ ಎಲ್ಲಾ ಆದಾಯವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಉಪಯೋಗ ಮಾಡಲಾಗುತ್ತಿದೆ. ಅಭಿವೃದ್ಧಿಗೆ ಅನುದಾನ ತೆಗೆದಿಟ್ಟು ಬೇರೆ ಕೆಲಸಗಳನ್ನು ಮಾಡಬೇಕು. ಕಾಂಗ್ರೆಸ್ ಬಂದ ಮೇಲೆ ಒಂದು ಕಾಮಗಾರಿ ಸ್ಯಾಂಕ್ಷನ್ ಆಗಿಲ್ಲ. ಮಹದಾಯಿಗೆ ಸಾವಿರ ಕೋಟಿ ತೆಗೆದಿಟ್ಟು ಟೆಂಡರ್ ಕರೆದಿದ್ದೆವು. ನಾವು ತೆಗೆದಿಟ್ಟ ಹಣವನ್ನೂ ವಾಪಸ್ ಪಡೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.