ಬೆಳಗಾವಿ,): 24ನೇ ಸಮ್ಮೇಳನದಲ್ಲಿ ಕೈಗೊಂಡ ಏಳು ನಿರ್ಣಯ ಸ್ವಾಗತ. ವಿರೇಶೈವ ಸಮ್ಮೇಳನದಲ್ಲಿ ಮೂವರು ಪಂಚಾಚಾರ್ಯರು ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲಿ ಲಿಂಗಾಯತರು ಹಿಂದುಗಳಲ್ಲ ಎಂದು ನಿರ್ಣಯ ಮಂಡನೆ ಮಾಡಲಾಗಿದೆ. 2017ರಲ್ಲಿ ಲಿಂಗಾಯತ ಧರ್ಮದ ಹೋರಾಟಕ್ಕೆ ವಿರೋಧ ಮಾಡಿದ್ರು. ಈಗ ವೀರಶೈವ ಮಹಾಸಭೆ ಲಿಂಗಾಯತರು ಹಿಂದುಗಳಲ್ಲ ಎಂದು ಘೋಷಿಸಿದೆ. ಪಂಚಾಚಾರ್ಯರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ ಜಾಮದಾರ್ (sm jamadar)ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು (ಡಿಸೆಂಬರ್ 26) ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ ಜಾಮದಾರ್, 2017ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಮಾಡಿತ್ತು. ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರೋಧಿಸಿದ್ದರು. ಈಗ ಇಬ್ಬರು ಅಧಿವೇಶನದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದಾರೆ. ಇನ್ನೂ ಯಡಿಯೂರಪ್ಪರ ಓರ್ವ ಮಗಳು ಮಹಾಸಭೆ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಹ ಆಗಿದ್ದಾರೆ. ಈಗ ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ತೆಗೆದುಕೊಂಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಈಗ ಅವರ ನಿಲುವು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದರು.