Breaking News

ಸಿದ್ದರಾಮಯ್ಯನವರೇ ಏನ್ ಮಾಡೋಕೆ ಹೊರಟಿದ್ದೀರಿ.: ಪ್ರಹ್ಲಾದ್‌ ಜೋಶಿ

Spread the love

ಹುಬ್ಬಳ್ಳಿ: ಸಿದ್ದರಾಮಯ್ಯ (Siddaramaiah) ಅವರೇ ನಿಮ್ಮ ವೈಫಲ್ಯ ಮುಚ್ಚಲು ಈ ರೀತಿ ವಿವಾದ ಹುಟ್ಟು ಹಾಕೋದು ನಿಮ್ಮ ಕೆಲಸವಾ? ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಏನ್ ಮಾಡೋಕೆ ಹೊರಟಿದ್ದೀರಿ.

ನಿಮ್ದು ಮುಠ್ಠಾಳತನವೋ, ಸಮಾಜ ಒಡೆಯಲು ಅತ್ಯಂತ ತಲೆ ಕೆಟ್ಟವರ ಥರ ಹೇಳಿಕೆ ಕೊಡ್ತಿದ್ದೀರೋ. ಸಮಾಜ ಒಡೆದು ವೋಟ್ ತೆಗೆದುಕೊಳ್ಳಬೇಕು ಅನ್ನೋದಾ? ಒಂದು ಕರ್ನಾಟಕ, ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಮಾತ್ರ ನೀವಿರೋದು. ಇದು ನಿಮ್ಮ ಸ್ಥಿತಿ. ಹೀಗೆ ನೀವು ಹುಚ್ಚ ಹುಚ್ಚರಾಗಿ ಮಾತಾಡಿದ್ರೆ ಜನ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸ್ತಾರೆ ನೆನಪಿಟ್ಟುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಅವರೇ ನಿಮ್ಮ ವೈಫಲ್ಯ ಮುಚ್ಚಲು ಈ ರೀತಿ ವಿವಾದ ಹುಟ್ಟು ಹಾಕೋದು ನಿಮ್ಮ ಕೆಲಸವಾ? ನಾವೇನಾದರೂ ಹಿಜಬ್ ವಿಷಯ ಎತ್ತಿದ್ವಾ? ಬಹುತೇಕ ಇಸ್ಲಾಂ ದೇಶಗಳಲ್ಲಿ ಹಿಜಬ್ ಇಲ್ಲ. ನಿಮಗ್ಯಾಕೆ ಈ ಕೆಟ್ಟ ವಿಚಾರ. ಸಿದ್ದರಾಮಯ್ಯಗೆ ಇದು ಗೊತ್ತಿಲ್ಲ ಅಂತಾ ಅಲ್ಲ. ಸಿದ್ದರಾಮಯ್ಯ ಮುಗ್ಧ ಅಲ್ಲ, ಸಿದ್ದರಾಮಯ್ಯ ಧೂರ್ತರಿದ್ದಾರೆ ಎಂದು ಕಿಡಿಕಾರಿದರು.


Spread the love

About Laxminews 24x7

Check Also

ಖಮೇನಿ ಹತ್ಯೆ ಪ್ರತಿಭಟನೆಗಳ ಬಗ್ಗೆ ಪೋಸ್ಟ್‌ – ಕಾಶ್ಮೀರ ಸಂಸದರ ವಿರುದ್ಧ ಎಫ್‌ಐಆರ್‌

Spread the loveಶ್ರೀನಗರ: ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ  ಹತ್ಯೆ ಪ್ರತಿಭಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ