ಸಾರಿಗೆ ಇಲಾಖೆಯಿಂದಲೇ‌ ಬಾಡಿಗೆ ಪಡೆಯಬಹುದು ಕಾರ್ಗೋ ಟ್ರಕ್ -ದರ ಎಷ್ಟು ಗೊತ್ತಾ?

Spread the love

ಬೆಂಗಳೂರು : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾಋ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ “ನಮ್ಮ ಕಾರ್ಗೋ-ಟ್ರಕ್ ಸೇವೆ” ಯೋಜನೆಗೆ 20 ನೂತನ ಟ್ರಕ್ಕುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್ಕುಗಳನ್ನು , ಒಂದು ವರ್ಷದೊಳಗಾಗಿ 500 ಟ್ರಕ್ಕುಗಳನ್ನು ಸೇರ್ಪಡೆ ಮಾಡಲಾಗುವುದು ಮತ್ತು ಪ್ರಸಕ್ತ *ಪೀಣ್ಯದಲ್ಲಿರುವ ನಿಗಮದ ಬಸವೇಶ್ವರ ಬಸ್ ನಿಲ್ದಾಣವನ್ನು ಈ ನಮ್ಮ‌ಕಾರ್ಗೋ ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುವುದು ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಘಟಕವನ್ನಾಗಿ ಬಳಸಿ , ಬಸ್ ನಿಲ್ದಾಣದಲ್ಲಿರುವ ಸ್ಥಳವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಉಪಯೋಗಕ್ಕಾಗಿ ಬಳಸಲಾಗುವುದೆಂದು ತಿಳಿಸಿದರು.

 

ನಿಗಮವು 2021 ರಲ್ಲಿ ನಮ್ಮ ಕಾರ್ಗೊ ಹೆಸರಿನಿಂದ ಲಾಜಿಸ್ಟಿಕ್ಸ್ ಸೇವೆಯನ್ನು ಪ್ರಾರಂಭಿಸಿತ್ತಾದರೂ, ನಿಗಮದ ಮಾರ್ಗಗಳು ಕಾರ್ಯಾಚರಣೆಯಲ್ಲಿರುವ ಸ್ಥಳಗಳಿಗೆ ನಿಗಮದ ಬಸ್ಸುಗಳಿಂದ ಮಾತ್ರ ಪಾರ್ಸಲ್‌ಗಳನ್ನು ಸಾಗಿಸಲಾಗುತ್ತಿತ್ತು.
ಈ ಯೋಜನೆಯನ್ನು ಮತ್ತೊಂದು ಹಂತಕ್ಕೆ ಅಭಿವೃದ್ಧಿಪಡಿಸುವ ಸಲುವಾಗಿ ಜಿಪಿಎಸ್ ಅಳವಡಿಕೆಯೊಂದಿಗೆ ನವೀನ ಬ್ರಾಂಡ್ “ನಮ್ಮ ಕಾರ್ಗೋ-ಟ್ರಕ್ ಸೇವೆ” ಗಳನ್ನು ಈಗ ಪರಿಚಯಿಸುತ್ತಿದೆ.

ಈ ನೂತನ ಟ್ರಕ್ ಸೇವೆಗಳಿಗೆ ನಿಗದಿಪಡಿಸಿರುವ ದರದ ವಿವರ ಹೀಗಿದೆ.
ಕಿ.ಮೀ ಪ್ರತಿ ಕಿ.ಮೀ ದರ ಕನಿಷ್ಠ ಕಿ.ಮೀ ಅವಧಿ ಕನಿಷ್ಠ ದರ
01 ರಿಂದ 100 ಕಿ.ಮೀ ವರೆಗೆ ರೂ.50/- 100 ಕಿ.ಮೀ ಗರಿಷ್ಠ 12 ಗಂಟೆ ರೂ.5000/-
01 ರಿಂದ 200 ಕಿ.ಮೀ ವರೆಗೆ ರೂ.40/- 200 ಕಿ.ಮೀ 24 ಗಂಟೆ
(ನಿರ್ಗಮನದ ಸಮಯದಿಂದ 24 ಗಂಟೆ ಅವಧಿ) ರೂ. 8000/-
200 ಕಿ.ಮೀ ಮೇಲ್ಪಟ್ಟ ಹೆಚ್ಚುವರಿ ಕಿ.ಮೀ ಗೆ ರೂ.35/- ಆಚರಣೆ ಕಿ.ಮೀ

ಟ್ರಕ್ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆ ಯಿಂದ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಿಗೆ ಲಭ್ಯವಿದೆ.


Spread the love

About Laxminews 24x7

Check Also

ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ: ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಿ- ಕಡಾಡಿ

Spread the love ಬೆಳಗಾವಿ: ‘ಇಂದಿನ ಮಕ್ಕಳು ಮತ್ತು ಯುವಜನರು ವಿದ್ಯಾರ್ಥಿ ಹಂತದಿಂದಲೇ ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ರಾಜ್ಯಸಭಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ