Breaking News

ಆರ್‌ಆರ್‌ ನಗರದಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್

Spread the love

ಬೆಂಗಳೂರು: ರಾಜರಾಜೇಶ್ವರಿ ಉಪ ಚುನಾವಣೆಯಲ್ಲಿ ಜೆಡಿಎಸ್ ಈ ಬಾರಿ ಹೀನಾಯವಾಗಿ ಸೋಲನುಭವಿಸಿದ್ದು, ಠೇವಣಿಯನ್ನು ಕಳೆದುಕೊಂಡಿದೆ.

ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೆಲುವಿನ ನಗೆ ಬೀರಿದ್ದು, ಕಾಂಗ್ರೆಸ್‍ನ ಕುಸುಮಾ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ 10,251 ಮತಗಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. ಕಳೆದ ಬಾರಿ ಜೆಡಿಎಸ್ 60 ಸಾವಿರ ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ ಇದರ ಅರ್ಧದಷ್ಟು ಮತಗಳನ್ನು ಸಹ ಜೆಡಿಎಸ್ ಅಭ್ಯರ್ಥಿ ಪಡೆದಿಲ್ಲ. ಒಟ್ಟು 57,936 ಮತಗಳ ಅಂತರದಿಂದ ಮುನಿರತ್ನ ಈ ಚುನಾವಣೆಯನ್ನು ಗೆದ್ದಿದ್ದಾರೆ.

ಚಲಾವಣೆಯಾದ ಒಟ್ಟು ಮತಗಳ ಪೈಕಿ 6ನೇ 1 ಭಾಗದಷ್ಟು ಮತಗಳನ್ನು ಪಡೆದರೆ ಠೇವಣಿ ಉಳಿಸಿಕೊಂಡಂತೆ. ಈ ಬಾರಿ ಒಟ್ಟು 2,09,828 ಮತಗಳು ಚಲಾವಣೆಯಗಿದ್ದು, ಇದರ ಒಂದು ಭಾಗ ಎಂದರೆ 34,971 ಮತಗಳನ್ನು ಜೆಡಿಎಸ್ ಅಭ್ಯರ್ಥಿ ಪಡೆಯಬೇಕಿತ್ತು. ಆದರೆ 24ನೇ ಸುತ್ತಿಗೆ ಜೆಡಿಎಸ್ ಪಡೆದ ಮತ ಕೇವಲ 10,197. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋಲನುಭವಿಸಿದಂತಾಗಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಶೇ. 5ರಷ್ಟು ಹೆಚ್ಚಳ : ಬೇಡಿಕೆ ಮೀರಿದ ಉತ್ಪಾದನೆ ನೆರೆರಾಜ್ಯಗಳಿಗೆ ಮಾರಾಟ, ರೈತರಿಗೂ ಲಾಭ

Spread the loveಬೆಂಗಳೂರು : ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ಉತ್ಪಾದನೆಯು ಶೇ.5ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್‌ಗೆ ಬರವಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ