ಮೈಸೂರು: ಇಂಡಿಯಾ ಒಕ್ಕೂಟದಿಂದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದರೆ ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ವಿಶ್ವನಾಥ್ ಹೇಳಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಸಾಮಾನ್ಯ ಕುಟುಂಬದಿಂದ ಬಂದವರು. ಎಲ್ಲ ರೀತಿಯ ಆಡಳಿತ ಅನುಭವ ಇರುವವರು. ದೇವೇಗೌಡರ ನಂತರ ರಾಜ್ಯದಿಂದ ಇನ್ನೊಬ್ಬರು ಪ್ರಧಾನಿ ಆಗಲಿ ಎಂಬುದು ನನ್ನ ಆಸೆ ಎಂದರು.
ಅಡ್ವಾಣಿ ಬಂದರೆ ಮೋದಿಗೆ ಕ್ರೆಡಿಟ್ ಸಿಗುವುದಿಲ್ಲ: ರಾಮ ಮಂದಿರ ಉದ್ಘಾಟನೆಗೆ ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಆಹ್ವಾನ ನೀಡದೇ ಇರುವುದು ಸರಿಯಲ್ಲ. ಲಾಲ್ ಕೃಷ್ಣ ಅಡ್ವಾಣಿ ರಾಮ ಮಂದಿರ ಹೋರಾಟದಲ್ಲಿ ಮುಂದೆ ಇದ್ದ ನಾಯಕರು. ವಯಸ್ಸಿನ ಕಾರಣಕ್ಕಾಗಿ ಅವರನ್ನು ದೂರವಿಟ್ಟು ರಾಮ ಮಂದಿರ ಉದ್ಘಾಟನೆ ಮಾಡುವುದು ತಪ್ಪು. ಮಾಜಿ ಪ್ರಧಾನಿ ದೇವೇಗೌಡರಿಗೂ ವಯಸ್ಸಾಗಿದೆ, ಅವರನ್ನು ಕರೆದಿದ್ದಾರೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಏಕೆ ಕರೆದಿಲ್ಲ? ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಅಡ್ವಾಣಿ ಬಂದರೆ ಕ್ರೆಡಿಟ್ ಮೋದಿಗೆ ಸಿಗುವುದಿಲ್ಲ. ಹಾಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ವಿಶ್ವನಾಥ್ ದೂಷಿಸಿದರು
Laxmi News 24×7