ಹಾಸನ : ಸಂಸದ ಪ್ರಜ್ವಲ್ ರೇವಣ್ಣ (MP Prajwal revanna) ಹಾಗೂ ಶಾಸಕ ಎಚ್.ಡಿ. ರೇವಣ್ಣ (MLA H D Revanna) ಪತ್ನಿ ಭವಾನಿ ರೇವಣ್ಣ (Bhavani revanna) ತನ್ನನ್ನು ಹಾಗೂ ತನ್ನ ಪತ್ನಿಯನ್ನು ಅಪಹರಿಸಿ (Kidnap) ಚಿತ್ರಹಿಂಸೆ ನೀಡಿದ್ದಾರೆ ಎಂದು ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಆರೋಪಿಸಿದ್ದಾನೆ.
ಈ ಕುರಿತು ದಕ್ಷಿಣ ವಲಯದ ಐಜಿಪಿಗೆ ದೂರನ್ನೂ ಸಹ ದಾಖಲಿಸಿದ್ದಾನೆ.
ತಾನು ಹತ್ತು ವರ್ಷಗಳ ಕಾಲ ಅವರ ಬಳಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಕಳೆದ ವರ್ಷ ಮಾರ್ಚ್ 12 ರಂದು ತಮ್ಮನ್ನು ಅಪಹರಿಸಿ ತಮ್ಮ ಸ್ವಾಧೀನದಲ್ಲಿದ್ದ 13 ಎಕರೆ ಜಮೀನನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಕಾರ್ತಿಕ್ ದೂರಿನಲ್ಲಿ ತಿಳಿಸಿದ್ದು, ಭವಾನಿ ರೇವಣ್ಣ ಹಾಗೂ ಇಬ್ಬರೂ ತನಗೆ ಚಿತ್ರಹಿಂಸೆ ನೀಡಿದ್ದರೆಂದು ಆರೋಪಿಸಿದ್ದಾನೆ.
Laxmi News 24×7