Breaking News

ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ ಎಂದ: ಜೋಶಿ

Spread the love

ಹುಬ್ಬಳ್ಳಿ: ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಪ್ರಶ್ನಿಸಿದ್ದಾರೆ.

ಸಂಸತ್‌ನಲ್ಲಿ ಭದ್ರತಾ ಲೋಪ ವಿಚಾರದಲ್ಲಿ ನಿರುದ್ಯೋಗವೂ (Unemployment) ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ನಿರುದ್ಯೋಗ ಇದೆ ಅಂತ ಹೇಳಿ ನಾನು ಯಾರನ್ನೋ ಎಂಪಿಯನ್ನೋ, ಎಂಎಲ್‌ಎಯನ್ನೋ ಹೋಗಿ ಕೊಲೆ ಮಾಡ್ತೀನಿ ಅಂದ್ರೆ ಆಗುತ್ತಾ? ಕರ್ನಾಟಕದಲ್ಲಿ ನಿರುದ್ಯೋಗ ಇಲ್ಲವಾ? ಛತ್ತೀಸ್‌ಗಢದಲ್ಲಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಇತ್ತು, ಅಲ್ಲಿ ನಿರುದ್ಯೋಗ ಇಲ್ಲವಾ? ನಿರುದ್ಯೋಗ ಇದೆ ಅಂತ ದೇಶದ ವಿರೋಧಿ, ದೇಶದ್ರೋಹಿ, ಟೆರರಿಸ್ಟ್ ಜೊತೆ ಲಿಂಕ್ ಇಟ್ಟುಕೊಳ್ಳೋಕೆ ಆಗುತ್ತಾ, ಹೀಗೆ ಮಾಡೋಕೆ ನಿಮ್ಮ ಬೆಂಬಲ‌ ಇದೆಯಾ ರಾಹುಲ್‌ ಗಾಂಧಿ? ಎಂದು ಪ್ರಶ್ನಿಸಿದರು.

ಮರ್ಡರ್ ಮಾಡಿದವನಿಗೂ ಅವನದ್ದೇ ಆದ ಲಾಜಿಕ್ ಇರುತ್ತೆ, ಆದರೆ ಇದನ್ನ ಸಮಾಜ ಒಪ್ಪುತ್ತಾ? ಎಂದು ಪ್ರಶ್ನಿಸಿದ ಪ್ರಹ್ಲಾದ್ ಜೋಶಿ, ರಾಹುಲ್ ಗಾಂಧಿ‌ ಎಷ್ಟು ಚೈಲ್ಡಿಶ್ ಆಗಿ ಮಾತಾಡ್ತಾ ಇದ್ದೀರಾ? ಮೋದಿ ವಿರೋಧ ಮಾಡೋ ಭರದಲ್ಲಿ ರಾಷ್ಟ್ರದ್ರೋಹಿಗಳನ್ನ ಸಮರ್ಥನೆ ಮಾಡಿಕೊಳ್ತೀರಾ? ಕಾಂಗ್ರೆಸ್ ‌ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹೇಳಿಕೆ‌ ಬಗ್ಗೆ ಸ್ಪಷ್ಟನೆ ಕೊಡಬೇಕು. ರಾಹುಲ್ ಹೇಳಿಕೆ ಇನ್ ಮೆಚ್ಯೂರ್ಡ್ ಹೇಳಿಕೆ. ನಿರುದ್ಯೋಗದ ಬಗ್ಗೆ ಪ್ರತ್ಯೇಕ ಚರ್ಚೆ ಮಾಡಲಿ, ಅದಕ್ಕೆ ಉತ್ತರ ಕೊಡೋಕೆ ನಾವು ತಯಾರು ಇದ್ದೇವೆ. ಜಗತ್ತಿನಲ್ಲಿ ವೇಗವಾಗಿ ಬೇಳೆಯುತ್ತಿರೋ ಆರ್ಥಿಕತೆ ನಮ್ಮದು. ಉದ್ಯೋಗ ಸಿಗದೆ ಆರ್ಥಿಕತೆ ಬೆಳೆಯುತ್ತದೆಯಾ? ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೌರಶಕ್ತಿ ಬಲ

Spread the loveಹುಬ್ಬಳ್ಳಿ: ವಾಣಿಜ್ಯ ‌ನಗರಿ ಹುಬ್ಬಳ್ಳಿ ವಿಮಾನ ‌ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ‌. ಇದರ ಭಾಗವಾಗಿ ಹುಬ್ಬಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ