ಬೆಳಗಾವಿ : ವಂಟಮೂರಿಯಲ್ಲಿ (Vantamoori) ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ (Assault) ನಡೆಸಿದ್ದ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಭೇಟಿಗೆ ಹೈಕೋರ್ಟ್ (High court) ನಿರ್ಬಂಧ ವಿಧಿಸಿದೆ. ಶನಿವಾರವಷ್ಟೇ ಬಿಜೆಪಿ (BJP) ಮಹಿಳಾ ನಿಯೋಗ ತಂಡದೊಡನೆ ತೆರಳಿ ಮಹಿಳೆಯೊಡನೆ ಮಾತುಕತೆ ನಡೆಸಿತ್ತು.
ಇನ್ನು ಮುಂದೆ ಮಹಿಳೆಯನ್ನು ಭೇಟಿಯಾಗುವ ಮಾಧ್ಯಮದವರು, ರಾಜಕಾರಣಿಗಳು ಹಾಗೂ ಮಾನವಹಕ್ಕು ಹೋರಾಟಗಾರರಿಗೆ ಹೈಕೋರ್ಟ್ ಷರತ್ತುಬದ್ದ ನಿರ್ಬಂಧ ವಿಧಿಸಿದೆ. ಮಹಿಳೆಯನ್ನು ಭೇಟಿಯಾಗಲು ವೈದ್ಯರ ಲಿಖಿತ ಪೂರ್ವಾನುಮತಿ ಅವಶ್ಯ ಎಂದು ಹೈಕೋರ್ಟ್ ಹೇಳಿದೆ. ಮಾನಸಿಕ ಹಾಗೂ ಶಾರೀರಿಕವಾಗಿ ಜರ್ಜರಿತವಾಗಿರುವ ಮಹಿಳೆ ಇನ್ನೂ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯದ ಹಿತಾಸಕ್ತಿಯ ದೃಷ್ಟಿಯಿಂದ ಕೋರ್ಟ್ ಈ ಕ್ರಮ ಕೈಗೊಂಡಿದೆ.
ಮಹಿಳೆಯ ಪುತ್ರ ಮತ್ತೊಬ್ಬ ಯುವತಿಯನ್ನು ಪ್ರೇಮಿಸಿ ಓಡಿಹೋದ ಕಾರಣಕ್ಕೆ ಯುವತಿಯ ಮನೆಯವರು ಮಹಿಳೆಯನ್ನು ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರು.