ಯತ್ನಾಳ್‌ ಹುಚ್ಚು ನಾಯಿಯಿದ್ದಂತೆ: ರೇಣುಕಾಚಾರ್ಯ

Spread the love

ದಾವಣಗೆರೆ: ಯತ್ನಾಳ್‌ (Basanagouda Patil Yatnal) ಹುಚ್ಚು ನಾಯಿಯಿದ್ದಂತೆ ಎಂದು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (Renukacharya) ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಬಗ್ಗೆ ನಾನು ಮಾತನಾಡುವುದಕ್ಕೂ ಅಸಹ್ಯ ಎನಿಸುತ್ತದೆ.

ನಾಯಿಗೆ ಇರುವ ನಿಯತ್ತು ಆ ಮನುಷ್ಯನಿಗೆ ಇಲ್ಲ. ಜೆಡಿಎಸ್‌ಗೆ ಹೋದವರನ್ನು ಕರೆತಂದಿದ್ದು ಯಡಿಯೂರಪ್ಪ. ಆದರೆ ಆ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ ಎಂದ ಅವರು, ಸರ್ವಜ್ಞರ ವಚನ ಹೇಳುವ ಮೂಲಕ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕೆ ಮಾಡಿದರೇ, ಮೋದಿ ಮತ್ತು ಕೇಂದ್ರ ವರಿಷ್ಠರನ್ನು ಟೀಕೆ ಮಾಡಿದಂತೆ ಆಗುತ್ತದೆ‌. ಯಡಿಯೂರಪ್ಪ ಆನೆ ಇದ್ದಂತೆ, ಅವರ ಬಗ್ಗೆ ಮಾತನಾಡುವವರು ಹುಚ್ಚು ನಾಯಿ. ಹುಚ್ಚು ನಾಯಿ ಬಗ್ಗೆ ಮಾತನಾಡುವುದು ಕೂಡ ವೇಸ್ಟ್ ಎಂದು ಗುಡುಗಿದರು.


Spread the love

About Laxminews 24x7

Check Also

ಮಹಾಶಿವರಾತ್ರಿ ಆಚರಣೆ ಯಾಕೆ ಗೊತ್ತಾ?

Spread the love ಮಹಾಶಿವರಾತ್ರಿಯನ್ನು  ದೇಶಾದ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಪ್ರತಿ ಮಾಸದಲ್ಲಿ ಶಿವರಾತ್ರಿ ಇರುತ್ತದೆ. ಇದಕ್ಕೆ ಮಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ