Breaking News

ಲೋಕಸಭೆ ಚುನಾವಣೆ: ಶೆಟ್ಟರ್‌ಗೆ ಕಾಂಗ್ರೆಸ್ ಟಿಕೆಟ್?

Spread the love

ಹುಬ್ಬಳ್ಳಿ: “ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಜಗದೀಶ್ ಶೆಟ್ಟರ್ ಅವರ ಅಭಿಪ್ರಾಯ ಕೇಳ್ತಿದ್ದೀವಿ. ಅವರೂ ಆಕಾಂಕ್ಷಿ ಅಂತ ಅಂದುಕೊಂಡಿದ್ದೀವಿ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಶೆಟ್ಟರ್ ನಿವಾಸದಲ್ಲಿಂದು ಮಾತನಾಡಿದ ಅವರು, “ನಮ್ಮ ಶಾಸಕರು, ಕಾರ್ಯಕರ್ತರು ಹಾಗೂ ಈ ಹಿಂದೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಯಾರಿಗೆ ಟಿಕೆಟ್​ ಕೊಡಬೇಕು ಎಂದು ಹೇಳ್ತಾರೋ ಅವರಿಗೆ ಟಿಕೆಟ್ ಕೊಡುತ್ತೇವೆ” ಎಂದರು.

ಮುಂದುವರಿದು ಮಾತನಾಡಿದ ಸಿಎಂ, “ಪ್ರತಿ ಜಿಲ್ಲೆಯಲ್ಲೂ ಕೂಡ ಒಬ್ಬೊಬ್ಬ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದೇವೆ. ಅವರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅಭಿಪ್ರಾಯ ಸಂಗ್ರಹಿಸಿ ಮೂವರ ಹೆಸರುಗಳನ್ನು ಪ್ಯಾನೆಲ್​ಗೆ ಕೊಡಿ ಅಂತ ಹೇಳಿದ್ದೇವೆ. ಅವರಲ್ಲಿ ಯಾರು ಸೂಕ್ತ ಆಗ್ತಾರೋ, ಅಂಥವರಿಗೆ ಟಿಕೆಟ್​ ಕೊಡುತ್ತೇವೆ” ಎಂದು ಹೇಳಿದರು.

ಅಲ್ಪಸಂಖ್ಯಾತರು ಭಾರತೀಯ ನಾಗರಿಕರಲ್ಲವೇ?: ಅಲ್ಪಸಂಖ್ಯಾತ ಸಮುದಾಯಕ್ಕೆ ಮೂರು ಟಿಕೆಟ್ ಬೇಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, “ನಾವು ಈ ಹಿಂದೆ ಕೂಡ ಎರಡು ಟಿಕೆಟ್​ ಕೊಟ್ಟಿದ್ದೆವು. ಈ ಬಾರಿಯೂ ಕೊಡ್ತೇವೆ. ಬಿಜೆಪಿಯವರು ಏನ್ ಮಾಡ್ತಾರೆ? ಅವರು ಅಲ್ಪಸಂಖ್ಯಾತರ ವೋಟ್ ಬೇಡ ಅಂತಾರೆ. ಅಲ್ಪಸಂಖ್ಯಾತರು ಭಾರತೀಯ ನಾಗರಿಕರಲ್ಲವೇ? ಇದಕ್ಕೆ ಅವರು ಉತ್ತರ ಹೇಳುತ್ತಾರಾ?. ಯತ್ನಾಳ್ ಗಡ್ಡ ಬಿಟ್ಟವರು, ಬುರ್ಖಾ ಹಾಕಿದವರು ಬರಬೇಡಿ ಅಂತಾರೆ, ಅವರನ್ನು ನಾನು ಭೇಟಿ ಮಾಡಲ್ಲ ಅಂತಾರೆ. ಅವರದು ಬಹುತ್ವದ ಪಕ್ಷನಾ? ನಮ್ಮ ದೇಶ ಬಹುತ್ವದ ಸಂಸ್ಕೃತಿ ಇರುವ ದೇಶ” ಎಂದರು.

ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಅಲ್ಲ: ಜಗದೀಶ್ ಶೆಟ್ಟರ್ ಮಾತನಾಡಿ, “ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಅಲ್ಲ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಯಾರೂ ಕೂಡ ಇದರ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿಲ್ಲ. ಲೋಕಸಭೆ ಚುನಾವಣೆ ಕುರಿತ ಚರ್ಚೆ ಜನವರಿಯಲ್ಲಿ ನಡೆಯುತ್ತದೆ. ನಾನು ಕಾಂಗ್ರೆಸ್​ ಬಲಪಡಿಸುವ ಬಗ್ಗೆ ಆಗ ಅಭಿಪ್ರಾಯ ತಿಳಿಸುತ್ತೇನೆ” ಎಂದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ