Breaking News

ಕಣ್ವ ಸೌಹಾರ್ದ ಪತ್ತಿನ ಸಂಘದ ಅವ್ಯವಹಾರ;ಸಿಬಿಐ ತನಿಖೆಗೆ ನೀಡಲು ಸರ್ಕಾರದ ಚಿಂತನೆ

Spread the love

ಬೆಳಗಾವಿಬೆಂಗಳೂರಿನ ಕಣ್ವ ಸೌಹಾರ್ದ ಪತ್ತಿನ ಸಹಕಾರ ಸಂಘದ ವಿರುದ್ಧ ಕೇಳಿಬಂದಿರುವ ಅವ್ಯವಹಾರವನ್ನು ಸಿಬಿಐಗೆ ಒಪ್ಪಿಸುವ ಚಿಂತನೆ ಇದೆ ಎಂದು ಸಹಕಾರ ಸಚಿವ ರಾಜಣ್ಣ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ರವಿಸುಬ್ರಮಣ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಕಣ್ವ ಸೌಹಾರ್ದ ಪತ್ತಿನ ಸಹಕಾರ ಸಂಘದಲ್ಲಿ 800 ಕೋಟಿ ರೂ.ನಷ್ಟು ಅವ್ಯವಹಾರವಾಗಿದೆ.

ಇದು ಸೌಹಾರ್ದ ಕಾಯ್ದೆ ಅಡಿಯಲ್ಲಿ ಬರುತ್ತಿದ್ದು, ಸಹಕಾರ ಇಲಾಖೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಠೇವಣಿದಾರರ ಹಿತ ದೃಷ್ಟಿಯಿಂದ ಸದನ ಒಪ್ಪಿಗೆ ನೀಡುವುದಾದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಸಿದ್ಧವಿದ್ದೇವೆ ಎಂದರು.
ರಾಜ್ಯದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಸೌಹಾರ್ದ ಸಹಕಾರಿ ಸಂಗಳು ಇವೆ. ಇದರಲ್ಲಿ 1,500ಕ್ಕೂ ಹೆಚ್ಚು ಸಂಘಗಳು ಮುಚ್ಚುವ ಸ್ಥಿತಿಯಲ್ಲಿವೆ. ರಾಜ್ಯದಲ್ಲಿನ ಸೌಹಾರ್ದ ಒಕ್ಕೂಟವನ್ನೇ ರದ್ದು ಪಡಿಸಬೇಕೆಂಬ ಚಿಂತನೆಯೂ ಇದೆ ಎಂದು ಹೇಳಿದರು.
ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಬಹುದೊಡ್ಡ ಹಗರಣವಾಗಿದೆ. ಬ್ಯಾಂಕ್ ಆರ್‌ಬಿಐ ನಿಯಂತ್ರಣದಲ್ಲಿ ಬರುತ್ತದೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದು, ಆರ್‌ಬಿಐ ಅಧಿಕಾರಿಯನ್ನು ನೇಮಕ ಮಾಡಿದೆ. ಈಗ ನಾವು ಏನು ಮಾಡುವುದಕ್ಕೂ ಇಲ್ಲದ ರೀತಿಯಲ್ಲಿ ಕೈ ಕಟ್ಟಿ ಹಾಕಲಾಗಿದೆ ಎಂದು ವಿವರಿಸಿದರು.
ಆ ಬ್ಯಾಂಕ್‌ನ ಠೇವಣಿದಾರರ ಸ್ಥಿತಿ ನೋಡಿದರೆ ಕರಳು ಕಿತ್ತು ಬರುವಂತಿದೆ. 50 ಲಕ್ಷ ರೂ.ಗಳ ಠೇವಣಿ ಇರಿಸಿವರು ಸಹ 500 ರೂ.ಗಳಿಗೆ ಗತಿ ಇಲ್ಲದ ಸ್ಥಿತಿಯಲ್ಲಿದ್ದಾರೆ ಎಂದ ಸಚಿವರು ಠೇವಣಿದಾರರ ಹಿತ ದೃಷ್ಟಿಯಿಂದ ಏನೆಲ್ಲ ಸಾಧ್ಯವೋ ಅದನ್ನು ಕೈಗೊಳ್ಳಲಾಗುತ್ತದೆ ಎಂದರು


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ