Breaking News

ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣ -ಚೈತ್ರಾ ಗ್ಯಾಂಗ್‌ ಮೇಲೆ ಜೈಲಿನಲ್ಲಿನ ಹಲ್ಲೆ!

Spread the love

ಬೆಂಗಳೂರು : ಬಿಜೆಪಿ (BJP) ಟಿಕೆಟ್ ನೀಡುವುದಾಗಿ ಆಮಿಷ ತೋರಿ ಕೋಟ್ಯಂತರ ರೂ. ವಂಚನೆ ನಡೆಸಿದ್ದ ಚೈತ್ರಾ (Chaitra) ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಆರೋಪಿಯ ಮೇಲೆ ಸಹಕೈದಿಗಳು ಹಲ್ಲೆ (Assault) ನಡೆಸಿದ್ದಾರೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಚನ್ನಾ ನಾಯ್ಕ್ (Chenna naik) ಮೇಲೆ ಸಹ ಕೈದಿಗಳು ಹಲ್ಲೆ ಮಾಡಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ (Parappana agrahara police station) ಪ್ರಕರಣ ದಾಖಲಾಗಿದೆ.

 

ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ 5 ಕೋಟಿ ರೂ. ಹಣ ಪಡೆದು ವಂಚಿಸಿದ್ದ ಆರೋಪದಡಿ ಚೈತ್ರಾ , ಚನ್ನಾ ನಾಯ್ಕ್ ಸೇರಿದಂತೆ ಹಲವು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದರು. ವಿಚಾರಣಾಧೀನ ಕೈದಿ ಆಗಿರುವ ಚನ್ನಾ ನಾಯ್ಕ್ ಹಾಗೂ ಇತರರನ್ನು ಜೈಲಿನ ಒಂದನೇ ಟವರ್‌ನ 4ನೇ ವಿಭಾಗದ 1ನೇ ಬ್ಯಾರಕ್‌ನಲ್ಲಿರುವ ಕೊಠಡಿಯಲ್ಲಿ ಇರಿಸಲಾಗಿದೆ. ನ. 26ರಂದು ಸಂಜೆ ಚನ್ನಾ ನಾಯ್ಕ್, ಮತ್ತೊಬ್ಬ ಆರೋಪಿ ಜೊತೆ ಮಾತನಾಡುತ್ತಿದ್ದಾಗ ಗಲಾಟೆ ಆಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಿಚಾರಣಾಧೀನ ಕೈದಿಗಳಾದ ಚೇತನ್, ರಾಜ್‌ಕುಮಾರ್, ಅಭಿಷೇಕ್, ಯೋಗೇಂದ್ರ ಹಾಗೂ ಧನುಷ್ ಕ್ಷುಲ್ಲಕ ಕಾರಣಕ್ಕಾಗಿ ಚನ್ನಾ ನಾಯ್ಕ್‌ ಜೊತೆ ಹೊಡೆದಾಟ ನಡೆಸಿದ್ದು ಈ ವೇಳೆ ಚನ್ನಾ ನಾಯ್ಕ್‌ನ ಕಣ್ಣು ಹಾಗೂ ಮೂಗಿಗೆ ಪೆಟ್ಟು ಬಿದ್ದಿರುವುದಾಗಿ ತಿಳಿದುಬಂದಿದೆ.

ಚೇತನ್, ರಾಜ್‌ಕುಮಾರ್, ಅಭಿಷೇಕ್, ಯೋಗೇಂದ್ರ ಹಾಗೂ ಧನುಷ್ ಎಂಬ ಕೈದಿಗಳ ವಿರುದ್ದ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ