ಸಾರಾಯಿ ಬಾಟಲಿಗಳಿಂದ ಕೂಡಿದ ಕಡಬಗಟ್ಟಿ ರಸ್ತೆ ?ಕಿಡಿಗೇಡಿಗಳ ಕೆಲಸಕ್ಕೆ ಬೆಸತ್ತ ವಾಯುವಿಹಾರಕ್ಕೆ ಬರುವ ವೃದ್ದರು..! ಕಣ್ಮುಚ್ಚಿ ಕುಳಿತ ಅರಣ್ಯ ಅಧಿಕಾರಿಗಳು?
ಗೋಕಾಕ: ನಗರದ ಕಡಬಗಟ್ಟಿ ರಸ್ತೆಯಲ್ಲಿ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದ್ದು ರಸ್ತೆಯಲ್ಲಿ ಭಾಗಶಃ ರಾಶಿ ಸಾರಾಯಿ ಬಾಟಲಿ ಮತ್ತು ಕಸದಿಂದ ತುಂಬಿ ತುಳುಕುತ್ತಿದೆ.

ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕಾದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇಂದು ಅರಣ್ಯ ಪ್ರದೇಶ ಮದ್ಯದ ಬಾಟಲಿಗಳಿಂದ ತುಂಬಿ ತುಳಕುತ್ತಿದೆ. ಇದರಿಂದ ವಾಯುವಿಹಾರಕ್ಕೆ ಹೋಗುವ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ರಸ್ತೆಯಲ್ಲಿ ಗಾಜಿನ ತುಂಡು ಹೆಚ್ಚಾಗಿವೆ . ಇದನ್ನು ನೋಡಿ ಅರಣ್ಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಗೋಡೆಬರಹ ಬರೆಯಿಸುವ ಅಧಿಕಾರಿಗಳ ಬೇಜವಾಬ್ದಾರಿತನ ಒಂದು ಕಡೆ ಆದರೆ ಇನ್ನೊಂದು ಕಡೆ ಮಧ್ಯಪಾನ ಮಾಡುವ ಕಿಡಿಗೇಡಿಗಳ ರಸ್ತೆ ಮೇಲೆ ಬಾಟಲಿ ಎಸೆದು ಹೋಗುತ್ತಿದ್ದಾರೆ.
ಕೂಡಲೇ ಅರಣ್ಯ ಅಧಿಕಾರಿಗಳು ಇಂತಹ ಕಿಡಿಗೇಡಿಗಳ ಕೃತ್ಯಕ್ಕೆ ಕಡಿಯಾಣ ಹಾಕಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
Laxmi News 24×7