Breaking News

ಐಟಿ ದಾಳಿ ವೇಳೆ 42 ಕೋಟಿ ರೂ. ಪತ್ತೆ ಪ್ರಕರಣ: ಹೃದಯಾಘಾತದಿಂದ ಗುತ್ತಿಗೆದಾರ ಅಂಬಿಕಾಪತಿ ಸಾವು

Spread the love

ಬೆಂಗಳೂರು: ಐಟಿ ದಾಳಿಯ ವೇಳೆ ಕೋಟಿ ಕೋಟಿ ಹಣ ಪತ್ತೆಯಾದ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಇಂದು ಸಂಜೆ 6.40 ಸುಮಾರಿಗೆ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಅಂಬಿಕಾಪತಿ ಮೃತಪಟ್ಟಿದ್ದಾರೆ.

ಕಳೆದ ತಿಂಗಳಷ್ಟೇ ಅಂಬಿಕಾಪತಿ ಮನೆಯ ಮೇಲೆ ಐಟಿ ದಾಳಿ ನಡೆದಾಗ 42 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗಿ ಆರೋಪ-ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿತ್ತು. ತಮ್ಮ ಮನೆಯಲ್ಲಿದ್ದ ಹಣ ಪತ್ತೆಯಾಗಿದ್ದಲ್ಲದೆ, ಸಾಕಷ್ಟು ಸುದ್ದಿಯಾದ್ದರಿಂದ ಅಂಬಿಕಾಪತಿ ಮಾನಸಿಕ ಒತ್ತಡಕ್ಕೆ ಒಳಗಾಗಿ, ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಐಟಿ ದಾಳಿ ನಡೆದ ಒಂದೇ ತಿಂಗಳಲ್ಲಿ ಅಂಬಿಕಾಪತಿ ಸಾವಿಗೀಡಾಗಿದ್ದಾರೆ. ನಾಳೆ ಅಂತಿಮ ಕ್ರಿಯೆ ನಡೆಯಲಿದೆ.

ಸುಲ್ತಾನ್‌ಪಾಳ್ಯ ಬಳಿಯ ಆತ್ಮಾನಂದ ಕಾಲನಿಯಲ್ಲಿರುವ ಅಂಬಿಕಾಪತಿ ಅವರಿಗೆ ಸೇರಿದ ಫ್ಲ್ಯಾಟ್‌ನಲ್ಲಿ ಐಟಿ ದಾಳಿಯ ವೇಳೆ 42 ಕೋಟಿ ರೂ. ಪತ್ತೆಯಾಗಿತ್ತು. ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಅಂಬಿಕಾಪತಿ ಅವರ ನಿವಾಸದ ಲಾಕರ್‌ನಲ್ಲಿ ಎರಡು ಸೂಟ್‌ಕೇಸ್‌ಗಳು ಸಿಕ್ಕಿದ್ದು, ಅವುಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದವು. ಜತೆಗೆ, 42 ಕೋಟಿ ರೂ.ಗಳಿಗೆ ಸಂಬಂಧಪಟ್ಟಂತೆ ಕೆಲ ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳ ಹೆಸರಿರುವ ಚೀಟಿಗಳು ಸಿಕ್ಕಿವೆ ಎಂದು ಹೇಳಲಾಗಿದೆ. ಈ ಹಣವನ್ನು ಯಾರಿಂದ ಸಂಗ್ರಹಿಸಲಾಗಿದೆ ಮತ್ತು ಯಾರಿಗೆ ಹಣ ತಲುಪಿಸಬೇಕಿತ್ತು ಎಂಬ ಮಾಹಿತಿ ಚೀಟಿಗಳಲ್ಲಿದೆ ಎಂದು ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ