Breaking News

ವಿಜಯೇಂದ್ರ ಇನ್ನು ಮಗು, : ಚಲುವರಾಯಸ್ವಾಮಿ

Spread the love

ಮಂಡ್ಯ: “ರಾಜ್ಯದ 226 ತಾಲೂಕುಗಳನ್ನು ಬರಗಾಲಪೀಡಿತ ತಾಲೂಕುಗಳು ಎಂದು ಘೋಷಿಸಿದ್ದೇವೆ.

ಈಗ ಹಂತ ಹಂತವಾಗಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಪರಿಹಾರ ಕೊಡುವ ಹಂತಕ್ಕೆ ಬಂದಿದ್ದೇವೆ” ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮಳವಳ್ಳಿಯ ಹಲಗೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರದ ಘೋಷಣೆಯನ್ನು ನಾವು ಕಾಯುತ್ತಿದ್ದೇವೆ. ನಂತರ ನಾವು ಕ್ಯಾಬಿನೆಟ್​ನಲ್ಲಿ ರೈತರಿಗೆ ಏನು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇವೆ ” ಎಂದು ಹೇಳಿದರು.

“ರಾಜ್ಯದ ಜನರಿಗೆ ವಿವಿಧ ರೀತಿಯಲ್ಲಿ ಪರಿಹಾರ ನೀಡಲು 75 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ರೂಪಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಎಲ್ಲಿ ಹೆಚ್ಚು ಬರಗಾಲ ಇದೆ ಎಂದು ತಿಳಿದುಕೊಂಡು ಅಂತಿಮ ವರದಿಯನ್ನು ಕೊಡಬೇಕು ಎಂದು ಹೇಳಿದ್ದಾರೆ. ಹಾಗಾಗಿ ಮಳವಳ್ಳಿ ಮತ್ತು ಮದ್ದೂರಿನಲ್ಲಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕೆಲಸ ಮಾಡುತ್ತಿದ್ದೇನೆ” ಎಂದರು.

 ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದ ಸಚಿವ ಚಲುವರಾಯಸ್ವಾಮಿಬರಕ್ಕೆ ಸಂಬಂಧಪಟ್ಟಂತೆ ಕ್ರಿಯಾ ಯೋಜನೆಯೇ ಆಗಿಲ್ಲ, ಕೇಂದ್ರದ ಕಡೆ ಬೊಟ್ಟು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, “ವಿಜಯೇಂದ್ರನಿಗೆ ಏನು ಗೊತ್ತು, ಅವರು ಇನ್ನು ಮಗು. ತಂದೆ ಮುಖ್ಯಮಂತ್ರಿಯಾಗಿದ್ದಾಗ, ಅವರೊಂದಿಗೆ ರಾಜಕೀಯ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡ ಮಾತ್ರಕ್ಕೆ ಇಡೀ ರಾಜ್ಯದ ಎಲ್ಲ ವಿಚಾರವನ್ನು ತಿಳಿದುಕೊಂಡಿದ್ದೇನೆ ಎಂದುಕೊಂಡರೇ ನಾವು ಏನು ಮಾಡೋಕ್ಕಾಗುತ್ತೆ” ಎಂದು ತಿರುಗೇಟು ನೀಡಿದರು.

“ಅಂತಿಮವಾಗಿ ಬೆಳೆ ವೀಕ್ಷಣೆಯಾಗಿದೆ, ಬೆಳೆ ಸರ್ವೇ ಆಗಿದೆ. ಪರಿಹಾರ ನೀಡುವುದಕ್ಕೆ ಏನೇನು ಪ್ರಕ್ರಿಯೆಯನ್ನು ಸರ್ಕಾರ ಮಾಡಬೇಕೋ, ನಮ್ಮ ಜಿಲ್ಲಾಡಳಿತ ಮತ್ತು ಎಲ್ಲ ಇಲಾಖೆಯವರು ಸಮಗ್ರವಾಗಿ ಮಾಡಿದ್ದಾರೆ. ನಾಳೆ ಕೇಂದ್ರ ಸರ್ಕಾರ ಮಂಜೂರಾತಿ ಕೊಟ್ಟರೇ, ನಾಡಿದ್ದು ರೈತರ ಖಾತೆಗೆ ಪರಿಹಾರದ ಹಣ ಹಾಕಬಹುದು, ಅಷ್ಟು ತಯಾರಿದ್ದೇವೆ” ಎಂದ ಅವರು, ಬರ ಪರಿಹಾರದ ಹಣ ದುರುಪಯೋಗ ಆಗಬಾರದು ಎಂದು ಈಗಾಗಲೇ ಬೆಳೆ ಸರ್ವೇ ಮಾಡಿದ್ದು, ಫಲಾನುಭವಿಗಳ ಖಾತೆ ಸಂಖ್ಯೆಗಳನ್ನು ಸಂಗ್ರಹಿಸಿದ್ದು, ರೈತರ ಖಾತೆಗೆ ನೇರವಾಗಿ ವರ್ಗಾವಣೆಯಾಗಲಿದೆ” ಎಂದು ತಿಳಿಸಿದರು.


Spread the love

About Laxminews 24x7

Check Also

ಗರ್ಲಗುಂಜಿಯಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನಿಂದ ವೃಕ್ಷಾರೋಪಣ…

Spread the love ಗರ್ಲಗುಂಜಿಯಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನಿಂದ ವೃಕ್ಷಾರೋಪಣ… ಪರಿಸರ ಜಾಗೃತಿಯ ಸಂದೇಶ ಖಾನಾಪೂರ ತಾಲೂಕಿನ ಗರ್ಲಗುಂಜಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ