Breaking News

ವಿಶ್ವಕಪ್​ ಸರಣಿಯ ಸೆಮೀಸ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್​ಗಳ ಗೆಲುವು ದಾಖಲಿಸಿದ ಆಸ್ಟ್ರೇಲಿಯಾ ಫೈನಲ್

Spread the love

ಕೋಲ್ಕತ್ತಾ: ಏಕದಿನ ವಿಶ್ವಕಪ್ (World Cup) ಸರಣಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 3 ವಿಕೆಟ್​ಗಳ ಗೆಲುವು ಸಾಧಿಸಿ ಫೈನಲ್​ ಪ್ರವೇಶ ಮಾಡಿದೆ.

ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ ನಡೆದ, ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 213ರನ್​ಗಳ ಗುರಿ ಬೆನ್ನಟ್ಟಿದ ಆಸೀಸ್ ಟ್ರಾವಿಸ್​ ಹೆಡ್​ (69), ಸ್ಟಿವೆನ್ ಸ್ಮಿತ್​ (30), ಜೋಶ್​ ಇಂಗ್ಲಿಸ್​ (28) ಬ್ಯಾಟಿಂಗ್​ ನೆರವಿನಿಂದ 47.2 ಓವರ್​ಗಳಲ್ಲಿ ಗುರಿಯನ್ನು ತಲುಪುವ ಮೂಲಕ 3 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ ವಿಶ್ವಕಪ್​ ಸಮರದಲ್ಲಿ ಆಸೀಸ್​ 8ನೇ ಬಾರಿಗೆ ಫೈನಲ್​ ಪ್ರವೇಶ ಮಾಡಿದೆ.

ಇದಕ್ಕೂ ಮೊದಲು ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಹರಿಣ ಪಡೆ ಡೆವಿಡ್​ ಮಿಲ್ಲರ್​ ಶತಕದ ನೆರವಿನಿಂದ 49.4 ಓವರಗಳ ಅಂತ್ಯಕ್ಕೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು 212 ರನ್​ಗಳನ್ನು ಕಲೆ ಹಾಕಿ ಕಾಂಗರೂ ಪಡೆಗೆ ಸಾಧಾರಣ ಗುರಿ ನೀಡಿತ್ತು.

ಆಸೀಸ್​ನ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ಕೇವಲ 24 ರನ್​ಗಳಿಗೆ ತನ್ನ ಪ್ರಮುಖ ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆರಂಭಿಕ ಬ್ಯಾಟರ್​ಗಳಾದ ಕ್ವಿಂಟನ್ ಡಿ ಕಾಕ್(3), ಟೆಂಬಾ ಬವುಮಾ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (6), ಐಡೆನ್ ಮಾರ್ಕ್ರಾಮ್ (10) ಒಬ್ಬರಹಿಂದೊಬ್ಬರಂತೆ ವಿಕೆಟ್​ಗಳನ್ನು ಒಪ್ಪಿಸಿ ಪೆವಿಲಿಯನ್​ ಸೇರಿದರು. ಮತ್ತೊಂದೆಡೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಹೆನ್ರಿಚ್​​ ಕ್ಲಾಸೇನ್(47) ಟ್ರಾವಿಸ್​ ಹೆಡ್​ ಎಸೆತದಲ್ಲಿ ಬೌಲ್ಡ್​ ಆಗುವ ಮೂಲಕ ಹರಿಣ ಪಡೆ ಮತ್ತೊಮ್ಮೆ ಆಘಾತಕ್ಕೊಳಗಾಯಿತು.

ಈ ವೇಳೆ ತಂಡಕ್ಕೆ ಆಪದ್ಬಾಂಧವ ಆದ ಡೇವಿಡ್​ ಮಿಲ್ಲರ್​(101) ಆಸೀಸ್​ ಬೌಲರ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಹರಿಣ ಪಡೆ 212 ರನ್​ಗಳ ಕಲೆ ಹಾಕಿತು. ಆಸ್ಟೇಲಿಯಾ ಪರ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ತಲಾ 3, ಟ್ರಾವಿಸ್ ಹೆಡ್, ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್​ ಪಡೆದು ಮಿಂಚಿದರು.

ಭಾನುವಾರ ಭಾರತದ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​ ಸಮರದ ಫೈನಲ್​ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.

ವಿಶ್ವಕಪ್​ ಫೈನಲ್​ಗೆ ಹೆಚ್ಚು ಬಾರಿ ಎಂಟ್ರಿಕೊಟ್ಟ ತಂಡಗಳು

  • ಆಸ್ಟ್ರೇಲಿಯಾ – 8
  • ಭಾರತ – 4
  • ಇಂಗ್ಲೆಂಡ್​ – 4
  • ವೆಸ್ಟ್​ ಇಂಡೀಸ್​ – 3
  • ಶ್ರೀಲಂಕಾ – 3

ವಿಶ್ವಕಪ್​ ಆವೃತ್ತಿಯೊಂದರಲ್ಲೇ ಅತಿ ಹೆಚ್ಚು ಗೆಲುವು ದಾಖಲಿಸಿದ ತಂಡಗಳು

  • 11 – ಆಸ್ಟ್ರೇಲಿಯಾ (2003)
  • 11 – ಆಸ್ಟ್ರೇಲಿಯಾ (2007)
  • 10 – ಭಾರತ (2023)
  • 9 – ಭಾರತ (2003)
  • 8 – ಶ್ರೀಲಂಕಾ (2007)
  • 8 – ನ್ಯೂಜಿಲೆಂಡ್ (2015)
  • 8 – ಆಸ್ಟ್ರೇಲಿಯಾ (2023)

Spread the love

About Laxminews 24x7

Check Also

ಕಡೋಲಿಯಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಶಂಕು ಸ್ಥಾಪನೆ

Spread the love ಕಡೋಲಿಯಲ್ಲಿ ನೂತನ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಶಂಕು ಸ್ಥಾಪನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ