Breaking News

ಜನರಿಗೆ ಹೊರೆಯಾದ ಆಸ್ತಿ ನೋಂದಣಿ ಶುಲ್ಕ ಹೆಚ್ಚಳ

Spread the love

ಬೆಳಗಾವಿ: ರಾಜ್ಯ ಸರ್ಕಾರ ಅಕ್ಟೋಬರ್‌ 1ರಿಂದ ಸ್ಥಿರಾಸ್ತಿಗಳ ನೋಂದಣಿ ಶುಲ್ಕವನ್ನು ಶೇ.25 ರಿಂದ 30ರವರೆಗೂ ಹೆಚ್ಚಳ ಮಾಡಿದ್ದು, ಜಿಲ್ಲೆಯ ಮಧ್ಯಮ ವರ್ಗ ತೊಂದರೆ ಅನುಭವಿಸುವಂತೆ ಮಾಡಿದೆ. ಅಲ್ಲದೇ ಆಸ್ತಿ ಖರೀದಿಸಲು ಜನ ಪರದಾಡುವಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಭೀಕರ ಬರಗಾಲದಿಂದ ಕಂಗೆಟ್ಟಿರುವ ಜನರಿಗೆ ಸರ್ಕಾರ ಈ ಶುಲ್ಕ ಹೆಚ್ಚಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ವರ್ಗ, ಕೂಲಿಕಾರರ ಕನಸು ಕನಸಾಗಿಯೇ ಉಳಿಯುವಂತೆ ಮಾಡಿದೆ‌ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಬೆಳಗಾವಿ ನಗರದಲ್ಲಿ ಆಸ್ತಿ ದರ ಗಗನಕ್ಕೇರಿರುವುದರಿಂದ ಜನರು ನಗರದ ಹೊರ ವಲಯದಲ್ಲಿ ನಿವೇಶನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ.

ಜಿಲ್ಲಾ ನೋಂದಣಿ ಅಧಿಕಾರಿ‌ ಮಹಾಂತೇಶ ಪಟಾತರ ಮಾತನಾಡಿ, “ಆಸ್ತಿ ಮಾರುಕಟ್ಟೆ ಮಾರ್ಗಸೂಚಿ ದರವನ್ನು ಕೇಂದ್ರೀಯ ಮಾರುಕಟ್ಟೆ ಉಪಸಮಿತಿ ಎಲ್ಲೆಲ್ಲಿ ಹೆಚ್ಚಳ ಮಾಡಬೇಕೋ ಮಾಡಿದೆ. ಇದು ಜಿಲ್ಲಾದ್ಯಂತ ಅ‌.1ರಿಂದ ಜಾರಿಗೆ ಬಂದಿದೆ. ಇನ್ನು 2021-22ರ ಸಾಲಿನಲ್ಲಿ 176 ಕೋಟಿ ಟಾರ್ಗೆಟ್ ಇತ್ತು. 186 ಕೋಟಿ ತೆರಿಗೆ ಸಂಗ್ರಹವಾಗಿ, 80 ಸಾವಿರ ಆಸ್ತಿಗಳ ನೋಂದಣಿಯಾಗಿತ್ತು. ಅದೇ ರೀತಿ, 2022-23ರ ಏಪ್ರಿಲ್ ವರೆಗೆ 192 ಕೋಟಿ ತೆರಿಗೆ ಸಂಗ್ರಹವಾಗಿ, 82 ಸಾವಿರ ಆಸ್ತಿಗಳ ನೋಂದಣಿಯಾಗಿದೆ. ದಸ್ತಾವೇಜುಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿವೆ‌” ಎಂದು ತಿಳಿಸಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ