Breaking News

ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣಕಾರ್ಯಕ್ರಮಕ್ಕೆ ನಾನು ಹೋಗಲ್ಲ.:C.T.RAVI

Spread the love

ಚಿಕ್ಕಮಗಳೂರು : ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿರುವ ಕಾರ್ಯಕ್ರಮಕ್ಕೆ ನಾನು ಹೋಗಲ್ಲ.

ಅವರು ನನ್ನ ಜೊತೆ 2 ಬಾರಿ ಫೋನ್​ನಲ್ಲಿ ಮಾತನಾಡಿದ್ದಾರೆ. 15ನೇ ತಾರೀಖು ಜವಾಬ್ದಾರಿ ಸ್ವೀಕಾರ ಮಾಡ್ತಿದ್ದಾರೆ. 15 ರ ರಾತ್ರಿವರೆಗೂ ಮಧ್ಯ ಪ್ರದೇಶದಲ್ಲಿ ಚುನಾವಣಾ ಕ್ಯಾಂಪೇನ್ ಇದೆ. 15ಕ್ಕೆ ನಾನು ಇರಲ್ಲ ಅಂತ ಹೇಳಿದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.

ನಂತರ ಎಂ ಪಿ ರೇಣುಕಾಚಾರ್ಯ ಹೇಳಿಕೆಗೆ ಸಿ ಟಿ ರವಿ ಮೌನ ವಹಿಸಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಾನು ಇದ್ದೀನಾ? ರಾಜ್ಯಾದ್ಯಂತ ಪ್ರವಾಸ ಮಾಡುವೆ, ರೇಣುಕಾಚಾರ್ಯ ಹೇಳಿಕೆಗೆ ನಾನೇನು ಹೇಳಲಿ. ನಾನ್ ಏನ್ ಹೇಳೋಕೆ ಆಗುತ್ತೆ. ಅದು ಅವರ ಭಾವನೆ, ಅವರು ಹೇಳಿದ್ದಾರೆ. ರಾಜ್ಯ ಸುತ್ತಬಹುದು, ಸುತ್ತುವ ಸಾಮರ್ಥ್ಯ ಇದೆ. ಸುತ್ತಲಿ ಎಂದು ಹೇಳಿದರು.

ನನಗೆ ರಾಜಕೀಯ ಬೇಡ ಅಂದ್ರೆ ಬಿಜೆಪಿ ಬಿಟ್ಟು ಇರ್ತೀನಿ. ಆದ್ರೆ, ಬೇರೆ ಪಾರ್ಟಿಗೆ ಹೋಗಿ ರಾಜಕೀಯ ಮಾಡಲ್ಲ. ನಾನು ಬೇರೆ ಪಕ್ಷಕ್ಕೆ ಮತ ಕೇಳಲು ಆಗಲ್ಲ. ಬಿಜೆಪಿಗೆ ಮತ ಕೇಳಬೇಕು. ಯಾವುದೇ ಜವಾಬ್ದಾರಿ ಇಲ್ಲ ಅಂದ್ರು ಶಕ್ತಿ ಮೀರಿ ಬಿಜೆಪಿ ಮತ ಕೇಳೋದು. ನಾನು ಬೇರೆ ಪಕ್ಷಕ್ಕೆ ಮತ ಕೇಳಲು ಆಗಲ್ಲ. ನನಗೆ ಕೊಟ್ರೆ ಮಾತ್ರ ಬಿಜೆಪಿ, ಕೊಡದಿದ್ರೆ ಬಿಜೆಪಿ ಅಲ್ಲ ಅಂತ ಹೇಳಲು ಆಗುತ್ತಾ. ಬಿಜೆಪಿ ಸೇರಿದಾಗಿನಿಂದ ವೋಟ್​​ ಕೇಳಿರೋದು, ಹಾಕಿರೋದು ಎರಡೂ ಬಿಜೆಪಿಗೆ ಎಂದು ಹೇಳಿದರು.

ನಾವು ಪಕ್ಷದ ಲಕ್ಷ್ಮಣ ರೇಖೆಯನ್ನ ಯಾವತ್ತೂ ದಾಟಿದ್ದೇವೆ: 20 ವರ್ಷ ಶಾಸಕ, 35 ವರ್ಷ ಕಾರ್ಯಕರ್ತ, ಪಕ್ಷದ ಲಕ್ಷ್ಮಣ ರೇಖೆ ಯಾವತ್ತು ದಾಟಿದ್ದೀವಿ. ಜಗಳ ಆಡಿದ್ದರೂ ನಮ್ಮ ಮನೆ ಒಳಗೆ ಜಗಳ ಆಡಿದ್ದೇನೆ. ಹೊಸ್ತಿಲು ದಾಟಿ ಬೇರೆಯವರ ಮನೆಗೆ ಹೋಗಿ ಕೂತು ನಮ್ಮ ಮನೆ ಸಮಸ್ಯೆ ಬಗೆಹರಿಸಿ ಅಂತ ಕೇಳಿಲ್ಲ. ಜಗಳ ಆಡಿ ಬಗೆಹರಿಸಿ ಅಂದ್ರೆ ನಮ್ಮ ಮನೆಯಲ್ಲೇ ಮಾಡೋದು. ಅಧ್ಯಕ್ಷ ಸ್ಥಾನ ಅನ್ನೋದು ಒಂದು ಸ್ಥಾನ. ಅದಕ್ಕೆ ಕೊಡುವ ಸ್ಥಾನ ಕೊಟ್ಟೇ ಕೊಡ್ತೀವಿ. ನ್ಯಾಯಪೀಠ ಬದಲಾಗಲ್ಲ. ನ್ಯಾಯಾಧೀಶರು ಬದಲಾಗ್ತಾರೆ. ಪೀಠ ಹಾಗೆ ಇರುತ್ತೆ. ಆ ಪೀಠಕ್ಕೆ ಕೊಡುವ ಗೌರವ ಕೊಟ್ಟೇ ಕೊಡ್ತೀವಿ. ನಮ್ಮ ಗುರಿ ಒಂದೇ. ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಬರಬೇಕು ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ