Breaking News

ನಿಖಿಲ್ ಕುಂದಗೋಳ ಆತ್ಮಹತ್ಯೆ ಪ್ರಕರಣದಲ್ಲಿ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಕುಟುಂಬಸ್ಥರ ಆಗ್ರಹ

Spread the love

ಹುಬ್ಬಳ್ಳಿ: ನಿಖಿಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಮಗೆ ಸೂಕ್ತ ನ್ಯಾಯ‌ ಒದಗಿಸಬೇಕು.‌ ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಾದ ಸಾತೇನಹಳ್ಳಿ, ಜಯಶ್ರೀ ಅವರನ್ನು ಅಮಾನತು ಮಾಡಬೇಕು ಹಾಗೂ ನಿಖಿ‌ಲ್ ಪತ್ನಿ ಮನೆಯವರನ್ನು ಕೂಡಲೇ ಬಂಧಿಸಬೇಕು ಎಂದು ನಿಖಿಲ್ ಕುಂದಗೋಳ ಕುಟುಂಬಸ್ಥರು ಒತ್ತಾಯಿಸಿದರು.

 

ನಗರಲ್ಲಿಂದು ನಿಖಿಲ್ ತಾಯಿ ಗೀತಾ ಕುಂದಗೋಳ, ಸಹೋದರ ರಘುವೀರ್ ಕುಂದಗೋಳ ಹಾಗೂ ತಂದೆ ಮೋಹನ್ ಕುಂದಗೋಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೌಟುಂಬಿಕ ಜಗಳವನ್ನು ನಾವು ಹಿರಿಯ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತಿದ್ದೆವು . ಆದರೆ ಕೇಶ್ವಾಪೂರ ಠಾಣೆಯ ಇನ್ಸ್​ಪೆಕ್ಟರ್ ಯು ಹೆಚ್ ಸಾತೇನಹಳ್ಳಿ ಹಾಗೂ ಎಎಸ್​​ಐ ಜಯಶ್ರೀ ಮಧ್ಯಸ್ಥಿಕೆ ವಹಿಸಿ ನಿಖಿಲ್ ಹಾಗೂ ನಿಖಿಲ್ ಪತ್ನಿಗೆ ವಿಚ್ಛೇದನ ಕೊಡಿಸಲು ಮುಂದಾಗಿದ್ದರು. ನಮ್ಮ ಕೌಟುಂಬಿಕ ಕಲಹವನ್ನು ಸರಿ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದೀವಿ. ಆದರೆ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಪೊಲೀಸರು ನಮ್ಮ ಮಗನಿಗೆ ಹಾಗೂ ಕುಟುಂಬಕ್ಕೆ ಮಾನಸಿಕ ‌ಕಿರುಕುಳ ನೀಡಿದ್ದಾರೆ. ಅಲ್ಲದೇ ನಮಗೂ ಕೂಡ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಮತ್ತು ನಿಖಿಲ್ ಪತ್ನಿ ಮನೆಯವರಿಂದಲೇ ನಮ್ಮ ಪುತ್ರ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿ, ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು.

ನಮ್ಮ ಮಗನಿಂದ ನಮ್ಮ ಮನೆಗೆ ಬೆಳಕು. ಆದ್ರೆ ನಮ್ಮ ಮಗನ ಅಗಲಿಕೆಯಿಂದಾಗಿ ಕುಗ್ಗಿ ಹೋಗಿದ್ದೇವೆ. ನಮಗೆ ಆದ ಅನ್ಯಾಯ ಯಾರಿಗೂ ಆಗಬಾರದು, ಪೊಲೀಸ್ ಕಮೀಷನರ್ ಅವರು ನಮಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ