Breaking News

ರಾಜ್ಯದ 1000 ಸ್ಮಾರಕಗಳನ್ನು ದತ್ತು ಕೊಡುವ ಉದ್ದೇಶವಿದೆ: ಸಚಿವ ಹೆಚ್ ಕೆ ಪಾಟೀಲ್

Spread the love

ಕಲಬುರಗಿ: ರಾಜ್ಯದಲ್ಲಿ ಒಟ್ಟು 1000 ಸ್ಮಾರಕಗಳನ್ನು ದತ್ತು ಕೊಡುವ ಉದ್ದೇಶವಿದ್ದು, ಎರಡು ವರ್ಷದಲ್ಲಿ ಈಡೇರಿಸುವ ಆಸೆ ಇದೆ.

ಈ ಎಲ್ಲ ಸ್ಮಾರಕಗಳ ರಕ್ಷಣೆ ಆ ಬಗ್ಗೆ ಪುಸ್ತಕಗಳ ಪ್ರಕಟಣೆ ಸೇರಿದಂತೆ ಜನರಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ‌ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು. ನಮ್ಮ ಸ್ಮಾರಕದರ್ಶನ ಹಾಗೂ ಸಂರಕ್ಷಣೆಗಾಗಿ ಪ್ರವಾಸ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಇತಿಹಾಸಕಾರರು ನಾಗಾವಿ ನಾಡಿನ ಗತವೈಭವ ಸಾರುವ ನಾಗಾವಿ ಘಟಿಕಾಸ್ಥಾನದ ಕುರಿತು ವಿವರಿಸುವಾಗ ನನಗೆ ಹಂಡೆ ಹಾಲು ಕುಡಿದಷ್ಟೇ ಸಂತಸವಾಯಿತು. ಕನ್ನಡದ ಮೊಟ್ಟ ಮೊದಲ ವಿಶ್ವವಿದ್ಯಾಲಯ ನಾಗಾವಿ ವಿವಿ ಎಂದು ತಿಳಿದು ಖುಷಿ ಪಟ್ಟೆ. ಎಲ್ಲರೂ ನಳಂದ ವಿವಿ ಮೊಟ್ಟಮೊದಲ ವಿವಿ ಎಂದು ಹೇಳುತ್ತಾರೆ. ಆದರೆ, ಕನ್ನಡದ ಮೊಟ್ಟಮೊದಲ ವಿಶ್ವವಿದ್ಯಾಲಯ ನಾಗಾವಿ ವಿವಿ ಇಲ್ಲಿ ಕಾನೂನು, ಗಣಿತ, ವೇದ, ಮನು ಸಾಹಿತ್ಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿತ್ತು. ಸುಮಾರು 1800 ವರ್ಷಗಳ ಹಿಂದೆ ವಿವಿ ಕೆಲಸ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದೇ ಹಿರಿಮೆ ಎಂದು ಹೇಳಿದರು.

ಈ ನಾಡಿನ ಬಗ್ಗೆ ನಮಗೆಲ್ಲ ಅಭಿಮಾನ ಇರಬೇಕು. ಇಲ್ಲಿ ನಮ್ಮ ಸಂಸ್ಕೃತಿ, ಪರಂಪರೆ ಇದ್ದು ನಾವೆಲ್ಲ ಇದರ ವಾರಸುದಾರರು. ಹಾಗಾಗಿ ಈ ಸ್ಮಾರಕಗಳನ್ನು ನಾವೆಲ್ಲ ಹೆಮ್ಮೆಯಿಂದ ರಕ್ಷಿಸಬೇಕು. ಇವುಗಳ ರಕ್ಷಣೆಗೆ ಈಗಾಗಲೇ ಹಲವರು ಕೈಜೋಡಿಸಿದ್ದಾರೆ. ಇದು ಖುಷಿಯ ಸಂಗತಿಯಾಗಿದೆ.
ನಾಗಾವಿ ವಿವಿ ಪುನರುಜ್ಜೀವನ ಗೊಳ್ಳಬೇಕು ಇದಕ್ಕೆ ಬೇಕಾಗುವ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಸಚಿವ ಪ್ರಿಯಾಂಕ್ ಅವರಿಗೆ ಭರವಸೆ ನೀಡಿದ ಸಚಿವ ಪಾಟೀಲ್ ಮತ್ತೆ ಈ ವಿವಿಯನ್ನು ನಾವು ಕಟ್ಟಬೇಕು. ನಾಗಾವಿ ಹೆಸರನ್ನು ಯಾವುದೇ ವಿವಿಗೆ ಇಡುವ ಮೂಲಕ ಸಿಮಿತಗೊಳಿಸುವುದು ಬೇಡ ಎಂದು ಅಭಿಪ್ರಾಯಪಟ್ಟರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ