Breaking News

ಮುಂಬೈನ ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ನಡುವೆ ಪಂದ್ಯ

Spread the love

ಮುಂಬೈ : ಮುಂಬೈನ ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನದ ನಡುವೆ ಪಂದ್ಯ ನಡೆಯುತ್ತಿದೆ.

ಆಸ್ಟ್ರೇಲಿಯಾ ವಿರುದ್ಧ ಟಾಸ್​ ಗೆದ್ದ ಅಫ್ಘಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ಬೌಲಿಂಗ್​ ನಡೆಸಿದೆ.

ವಿಶ್ವಕಪ್​ ಕ್ರಿಕೆಟ್​ 2023ರ 39ನೇ ಪಂದ್ಯ ಇದಾಗಿದೆ. ಸೂಪರ್​ ಫೋರ್​ ತಲುಪಲು ಅಫ್ಘಾನಿಸ್ತಾನಕ್ಕೆ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಆಸೀಸ್​ ಒಂದು ವೇಳೆ ಅಫ್ಘಾನ್ ತಂಡವನ್ನು ಮಣಿಸಿದರೆ, ನೇರವಾಗಿ ಸೆಮಿಫೈನಲ್​ಗೆ ತಲುಪಲಿದೆ. ಹೀಗಾಗಿ ಎರಡು ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ.

 

 

ಉಭಯ ತಂಡಗಳು ಕೆಲವು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಅಫ್ಘಾನ್ ತಂಡ ಫಜ್ಹಲಕ್ ಫಾರೂಕಿ ಬದಲಿಗೆ, ನವೀನ್ ಉಲ್ ಹಕ್ ಸ್ಥಾನ ತುಂಬಿದರೆ, ಆಸ್ಟ್ರೇಲಿಯಾ ಪ್ರಮುಖ ಎರಡು ಬದಲಾವಣೆ ಕಂಡಿವೆ. ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಗ್ರೀನ್ ಬದಲಿಗೆ ಮಿಚೆಲ್ ಮಾರ್ಷ್ ಮತ್ತು ಮ್ಯಾಕ್ಸ್​​ವೆಲ್ ಆಗಮಿಸಿದ್ದಾರೆ.

ಆಸ್ಟ್ರೇಲಿಯಾ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು, 2 ಸೋಲು ಕಂಡರೆ, ಅಫ್ಘನ್ 7 ಪಂದ್ಯಗಳ ಪೈಕಿ 4ರಲ್ಲಿ ಗೆಲುವು, 3ರಲ್ಲಿ ಸೋಲು ಕಂಡಿದೆ. ಆಸೀಸ್ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ಅಫ್ಘನ್ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

ಅಫ್ಘನ್ ವಿರುದ್ಧದ ಇಂದಿನ ಪಂದ್ಯದಲ್ಲಿ ಆಸೀಸ್ ಜಯದೊಂದಿಗೆ 12 ಅಂಕ ಪಡೆದು ಸೆಮೀಸ್​ಗೆ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಸೂಪರ್​ ಫೋರ್​ ತಲುಪಲು ಅಫ್ಘಾನಿಸ್ತಾನಕ್ಕೂ ಕೂಡ ಈ ಪಂದ್ಯದ ಗೆಲುವು ನಿರ್ಣಾಯಕವಾಗಿದೆ. ಯಾವ ತಂಡ ಗೆಲವು ಸಾಧಿಸಲಿದೆ ಅನ್ನೋದನ್ನು ಕಾದು ನೋಡಬೇಕಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ