Breaking News

ಟೈಗರ್​ 3′ ಮುಂಗಡ ಬುಕ್ಕಿಂಗ್​ನಲ್ಲಿ ದಾಖಲೆ; ಸಿನಿಮಾ ಟಿಕೆಟ್​ ಶರವೇಗದಲ್ಲಿ ಮಾರಾಟ

Spread the love

ಮನೀಶ್​ ಶರ್ಮಾ ನಿರ್ದೇಶನದ, ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ನಟನೆಯ ‘ಟೈಗರ್​ 3’ ಸಿನಿಮಾದ ಅಡ್ವಾನ್ಸ್​ ಬುಕ್ಕಿಂಗ್​ಗೆ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ.

ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ‘ಟೈಗರ್​ 3’.

ಸಲ್ಮಾನ್​ ಖಾನ್​, ಕತ್ರಿನಾ ಕೈಫ್​ ಮತ್ತು ಇಮ್ರಾನ್​ ಹಶ್ಮಿ ಮುಖ್ಯಭೂಮಿಕೆಯ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ​ ಇದೆ. ಮನೀಶ್​ ಶರ್ಮಾ ನಿರ್ದೇಶನದ ಸಿನಿಮಾದ ಅಡ್ವಾನ್ಸ್​ ಬುಕ್ಕಿಂಗ್​ಗೆ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಬಿಡುಗಡೆಗೂ ಮುನ್ನ ಟಿಕೆಟ್​ಗಳು ಶರವೇಗದಲ್ಲಿ ಮಾರಾಟವಾಗುತ್ತಿವೆ. ಈಗಾಗಲೇ ಮುಂಗಡ ಟಿಕೆಟ್​ ಮಾರಾಟದಲ್ಲಿ ಸುಮಾರು 4.2 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಈ ವರ್ಷದ ಅತಿ ಹೆಚ್ಚು ಮುಂಗಡ ಟಿಕೆಟ್​ ಮಾರಾಟವಾದ ಮೂರನೇ ಚಿತ್ರ ಇದಾಗಿದೆ.

ಸಲ್ಮಾನ್ ಖಾನ್​ ಅವರ ‘ಟೈಗರ್​ 3’ ಮುಂಗಡ ಬುಕ್ಕಿಂಗ್​ನಲ್ಲಿ ದಾಖಲೆ ಮಾಡಿದೆ. ರಿಲೀಸ್​ನ ಮೊದಲ ದಿನದ ಟಿಕೆಟ್ ಮಾರಾಟದಲ್ಲಿ ಸುಮಾರು 4.2 ಕೋಟಿ ರೂಪಾಯಿ ಗಳಿಸಿದೆ. ಶಾರುಖ್​ ಖಾನ್​ ಅವರ ಜವಾನ್​ ಮತ್ತು ಪಠಾಣ್​ ನಂತರ ಮುಂಗಡ ಟಿಕೆಟ್​ ಮಾರಾಟದ ವಿಚಾರದಲ್ಲಿ ‘ಟೈಗರ್​ 3’ ಮೂರನೇ ಸ್ಥಾನದಲ್ಲಿದೆ. ಚಿತ್ರವು ನವೆಂಬರ್​ 12ರಂದು ತೆರೆ ಕಾಣಲಿದ್ದು, 7,392 ಥಿಯೇಟರ್​ಗಳಲ್ಲಿ ಪ್ರದರ್ಶನ ಕಾಣಲಿದೆ. ಬಿಡುಗಡೆಯಾದ ಮೊದಲ ದಿನಕ್ಕಾಗಿ 1.42 ಲಕ್ಷಕ್ಕೂ ಹೆಚ್ಚು ಟಿಕೆಟ್​ಗಳು ಸೇಲ್​ ಆಗಿವೆ. ಇದರ ಒಟ್ಟು ಮೊತ್ತ ಸುಮಾರು 4.2 ಕೋಟಿ ರೂ. ಆಗಿದೆ.

 

 

ಯಶ್​ ರಾಜ್​ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ. ಚಿತ್ರವನ್ನು IMAX, 4DX, DBOX, ICE, PXL ಮತ್ತು 4D ಎಮೋಷನ್ ಸೇರಿದಂತೆ ವಿವಿಧ ಪ್ರೀಮಿಯಂ ಸ್ವರೂಪಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಅದರಲ್ಲಿ ಹಿಂದಿ 2D ಶೋಗಳು 7,231 ಪ್ರದರ್ಶನಗಳಲ್ಲಿ 1,38,804 ಟಿಕೆಟ್​ಗಳನ್ನು ಮಾರಾಟ ಮಾಡಿದೆ.​ ಹಿಂದಿ IMAX 2D ಶೋಗಳು 109 ಸ್ಕ್ರೀನ್‌ಗಳಲ್ಲಿ 2,713 ಟಿಕೆಟ್‌ಗಳನ್ನು ಸೇಲ್​ ಮಾಡಿತು.


Spread the love

About Laxminews 24x7

Check Also

ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!!

Spread the love ಅನಮೋಡ ಘಾಟ್ ರಸ್ತೆಯಲ್ಲಿ ಭೂಕುಸಿತ!!! ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪೂರ ತಾಲೂಕಿನ ಅನಮೋಡ್ ಘಾಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ