ಬೆಳಗಾವಿ: ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡನನ್ನು ಹೆಂಡತಿಯೇ ಕೊಲೆ ಮಾಡಿರುವ ಘಟನೆ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಪತಿಗೆ ನಿದ್ರೆ ಮಾತ್ರೆ ನೀಡಿ, ನಿದ್ದೆ ಹತ್ತಿದ ಬಳಿಕ ಕುತ್ತಿಗೆಗೆ ಹಗ್ಗದಿಂದ ಬಿಗಿದು ಪತ್ನಿ ಮಹಾದೇವಿ ಕರ್ಕಿ ಕೊಲೆ ಮಾಡಿದ್ದಾಳೆ.
ಬಾಬು ಕಲ್ಲಪ್ಪ ಕರ್ಕಿ (48) ಕೊಲೆಯಾದ ದುರ್ದೈವಿ.
ನಿನ್ನೆ ಬೆಳಗ್ಗೆಯ ಸಮಯ ಆರೋಪಿ ಪತ್ನಿ ಮಹಾದೇವಿ ಕರ್ಕಿ, ‘ಆಕಸ್ಮಿಕವಾಗಿ ಪತಿ ಮೃತ’ರಾಗಿದ್ದಾರೆಂದು ಅಕ್ಕಪಕ್ಕದ ಮನೆಯವರನ್ನು ನಂಬಿಸಲು ಪ್ರಯತ್ನಿಸಿದ್ದಾಳೆ. ಈ ವೇಳೆ, ಮೃತ ಬಾಬು ಕುತ್ತಿಗೆಗೆ ಗಾಯವಾಗಿದ್ದು ಗಮನಿಸಿದ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ನಂದಗಡ ಪೊಲೀಸರು ಮತ್ತು ಗ್ರಾಮಸ್ಥರ ಮುಂದೆ ಆರೋಪಿ ಮಹಾದೇವಿ ತನ್ನ ಗಂಡ ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಕಿರುಕುಳ ತಾಳಲಾರದೇ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇನ್ನು ನಿನ್ನೆ ತಡರಾತ್ರಿ ಆರೋಪಿಯನ್ನು ಬಂಧಿಸಿದ ನಂದಗಡ ಪೊಲೀಸರು, ಖಾನಾಪುರ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ಸದ್ಯ ಪ್ರಕರಣ ನಂದಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.