Breaking News

ಮಹಾದೇವ ಸಾಹುಕಾರ್ ಮೇಲೆ ಗುಂಡಿನ ದಾಳಿ ಪ್ರಕರಣ- ಮತ್ತೆ ಐವರ ಬಂಧನ

Spread the love

ವಿಜಯಪುರ: ಭೀಮಾತೀರದ ಹಂತಕ ಮಹಾದೇವ ಸಾಹುಕಾರ್ ಮೇಲಿನ ಫೈರಿಂಗ್ ಪ್ರಕರಣದಲ್ಲಿ ಮತ್ತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಎಸ್‍ಪಿ ಅನುಪಮ್ ಅಗರವಾಲ್ ಅವರು, ವಿಜಯಪುರದ ಅತಾಲಟ್ಟಿ ಗ್ರಾಮದ ಯಾಶೀನ್ ದಂದರಗಿ (25), ಗೂಳಿ ಸೊನ್ನದ (25), ಸಿದ್ದರಾಯ ಬೊಮ್ಮನಜೋಗಿ (34), ಅಲಿಯಾಬಾದ ಗ್ರಾಮದ ಸಚಿನ ಮಾನವರ (28) ಹಾಗೂ ಚಡಚಣದ ರವಿ ಬಂಡಿ (20) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.ಮಹಾದೇವ ಸಾಹುಕಾರ್ ಹತ್ಯೆಯ ಕೃತ್ಯಕ್ಕೆ ಬಳಸಿದ 2 ಕಂಟ್ರಿ ಪಿಸ್ತೂಲ್, 5 ಜೀವಂತ ಗುಂಡು, 4 ಮೊಬೈಲ್, 1 ಆಟೋ ರಿಕ್ಷಾ, 1 ಮಚ್ಚು ಜಪ್ತಿ ಮಾಡಲಾಗಿದೆ. ಇಲ್ಲಿವರೆಗೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‍ಪಿ ಅಗರವಾಲ್ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಗೊಂದಲದ ಮಧ್ಯೆಯೂ ಗುಡ್ ನ್ಯೂಸ್ ನೀಡಿದ ಪೊಲೀಸರು

Spread the loveಬೆಳಗಾವಿಯ ಜಿಲ್ಲೆಯಲ್ಲಿ ಅದ್ಧೂರಿ ಗಣೇಶೋತ್ಸವ ನಡೆಯುತ್ತಿದ್ದು, ನಾಳೆ ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಸಂಬಂಧ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ