Breaking News

ವಡೇರಹಟ್ಟಿಯ ಇಬ್ಬರು ಬಾಲಕರಿಗೆ ಕೆ.ತ್ಯಾಗರಾಜನ್ ಶುಕ್ರವಾರ ಸನ್ಮಾನ

Spread the love

ಬೆಳಗಾವಿ : ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಿದ್ದ ಗೋಕಾಕ ತಾಲ್ಲೂಕಿನ ವಡೇರಹಟ್ಟಿಯ ಇಬ್ಬರು ಬಾಲಕರಿಗೆ ಇಲ್ಲಿನ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ಕೆ.ತ್ಯಾಗರಾಜನ್ ಶುಕ್ರವಾರ ಸನ್ಮಾನಿಸಿ, ಕೇಂದ್ರ ಗೃಹ ಸಚಿವಾಲಯದಿಂದ ಕೊಡ ಮಾಡಿದ ಜೀವನ ರಕ್ಷಾ ಪದಕ ವಿತರಿಸಿದರು.

ವಡ್ಡೇರಹಟ್ಟಿಯ  ಸಿದ್ದಪ್ಪ ಕೆಂಪಣ್ಣ ಹೊಸಟ್ಟಿ, ಶಿವಾನಂದ ದಶರಥ ಹೊಸಟ್ಟಿ ಬಾಲಕರಿಗೆ  1 ಲಕ್ಷ ಚೆಕ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು.

2018ರ ಮೇ 8ರಂದು ಗೋಕಾಕ ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಇಂದ್ರವೇಣಿ ಹಳ್ಳದಲ್ಲಿ ಆಕಸ್ಮಿಕವಾಗಿ ಬಿದ್ದು ಕೊಚ್ಚಿ ಹೋಗುತ್ತಿದ್ದನು. ಈ ವೇಳೆ ಹಳ್ಳದಲ್ಲಿ ಮುಳುಗುತ್ತಿದ್ದ ಬಾಲಕನನ್ನು ಪ್ರಾಣಾಪಾಯದಿಂದ ರಕ್ಷಿಸಿ, ಸಮಯ ಪ್ರಜ್ಞೆ ತೋರಿದ್ದರು. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ