Breaking News

ಹೆಬ್ಬಾಳ್ಕರ್ ಮತ್ತು ತಮ್ಮ ನಡುವೆ ಯಾವುದೇ ರೀತಿಯ ಅಸಮಾಧಾನವಿಲ್ಲ :ಸಚಿವ ಸತೀಶ್ ಜಾರಕಿಹೊಳಿ

Spread the love

ಬೆಂಗಳೂರು: ಲಕ್ಷ್ಮೀಹೆಬ್ಬಾಳ್ಕರ್ ಹಾಗು ನನ್ನ ನಡುವೆ ಅಸಮಾಧಾನವಿಲ್ಲ. ಎಲ್ಲವೂ ಊಹಾಪೋಹ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರ ಮಾತನಾಡಿದ ಅವರು, ಯಾವುದೇ ಕೋಲ್ಡ್ ವಾರ್ ಕೂಡ ನಮ್ಮ ಮಧ್ಯೆ ಇಲ್ಲ. ಡಿ.ಕೆ.ಶಿವಕುಮಾರ್ ಯಾಕೆ ಹಸ್ತಕ್ಷೇಪ ಮಾಡ್ತಾರೆ?.‌ ನಾನು ಯಾವ ಹೈಕಮಾಂಡ್​ಗೂ‌ ತಿಳಿಸಿಲ್ಲ. ಸಮಸ್ಯೆ ಇದ್ದರೆ ನಾವೇ ಸರಿಮಾಡಿಕೊಳ್ಳುತ್ತೇವೆ ಎಂದರು.

ಬೆಳಗಾವಿ ಪಾಲಿಕೆಯಲ್ಲಿ ಗೊಂದಲದ ವಿಚಾರವಾಗಿ ಪ್ರತಿಕ್ರಿಯಿಸಿ, ಬೇಕೆಂದೇ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಲವು ದಾಖಲೆಗಳು ನಾಪತ್ತೆಯಾಗಿವೆ. ಯಾಕೆ, ಏನು ಅಂತ ಕೇಳಿದ್ದೇವೆ. ಅಭಯ್ ಪಾಟೀಲ್ ಬೇಕಂತಲೇ ಆರೋಪ ಮಾಡುತ್ತಿದ್ದಾರೆ. ತಮಗೆ ಕನ್ನಡ ಬರಲ್ಲ, ಅಧಿಕಾರಿಗಳು ಮಾಡಿದ್ದಾರೆ ಅನ್ನುತ್ತಾರೆ. ಆ ಕಡತ ಎಲ್ಲಿಗೆ ಹೋಯ್ತು ಎಂದು ಹೇಳಬೇಕಲ್ಲ?. ನೀವ್ಯಾಕೆ ಕಳುಹಿಸಿದ್ದು ಎಂದು ಅಧಿಕಾರಿಗಳ ಮೇಲೆ ಹೋಗ್ತಾರೆ. ಅಧಿಕಾರಿಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಅಭಯ್​ ಪಾಟೀಲ್​ ಮಾಡುತ್ತಿದ್ದಾರೆ. ಅವರು ಸರ್ಕಸ್ ಕಂಪನಿಯಲ್ಲಿನ ರಿಂಗ್ ಮಾಸ್ಟರ್ ರೀತಿ. ಯಾವ ರೀತಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಎಂಬುದು ಸ್ಥಳೀಯವಾಗಿ ಎಲ್ಲರಿಗೂ ಗೊತ್ತು. ಈಗ ದೂರು ಕೊಟ್ಟಿದ್ದಾರೆ. ತಪ್ಪಿದ್ದರೆ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

ಅಭಯ್ ಪಾಟೀಲ್ ಸರ್ಕಾರಕ್ಕೆ ದೂರು ನೀಡಿಲ್ಲ. ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ರಾಜ್ಯಪಾಲರು ವಿವರ ಕೇಳಿದರೆ ಸರ್ಕಾರ ಮಾಹಿತಿ ನೀಡಲಿದೆ.‌ ಅದೊಂದು ನ್ಯೂಮರಿಕಲ್ ಎರರ್. ರಾಜ್ಯ ಸರ್ಕಾರಕ್ಕೂ ಅವರು ಪತ್ರ ಬರೆದಿಲ್ಲ.‌ ನೇರವಾಗಿ ಯುಪಿಎಸ್​ಸಿಗೆ ಪತ್ರ ಬರೆದಿದ್ದಾರೆ. ಅಧಿಕಾರಿಗಳನ್ನು ಹೆದರಿಸುವುದು, ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದರು.


Spread the love

About Laxminews 24x7

Check Also

ಸರ್ಕಾರಿ ಬಸ್‌ಗಳ ಮೇಲಿನ ಜಾಹೀರಾತಿಗೆ ಬ್ರೇಕ್ – 15 ದಿನದೊಳಗೆ ಜಾಹೀರಾತು ತೆರವಿಗೆ ಸೂಚನೆ

Spread the loveಬೆಂಗಳೂರು: ಸರ್ಕಾರಿ ಸಾರಿಗೆ ಬಸ್‌ಗಳ ಮೇಲೆ ತಂಬಾಕು ಜಾಹೀರಾತು  ವಿರುದ್ಧ ಜನಾಕ್ರೋಶ ಹೆಚ್ಚಾಗಿತ್ತು. ಬಸ್‌ಗಳ ಮೇಲಿನ ಜಾಹೀರಾತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ