ಮಂಗಳೂರು (ದಕ್ಷಿಣ ಕನ್ನಡ): ನಗರದ ಉರ್ವಾ ಮೈದಾನದಲ್ಲಿ ನಡೆದ ಹುಲಿವೇಷ ಸ್ಪರ್ಧೆ ಪಿಲಿನಲಿಕೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಭಾಗಿಯಾದರು.
ಮಂಗಳೂರು (ದಕ್ಷಿಣ ಕನ್ನಡ): ನಗರದ ಉರ್ವಾ ಮೈದಾನದಲ್ಲಿ ನಡೆದ ಹುಲಿವೇಷ ಸ್ಪರ್ಧೆ ಪಿಲಿನಲಿಕೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಭಾಗಿಯಾದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಪಿಲಿನಲಿಕೆ ಎಂಬ ಹುಲಿವೇಷ ಸ್ಪರ್ಧೆ ನಡೆಯಿತು.
ನಿನ್ನೆ ರಾತ್ರಿ ಹರ್ಭಜನ್ ಸಿಂಗ್ ಹಾಗೂ ಸುನೀಲ್ ಶೆಟ್ಟಿ ಪಿಲಿನಲಿಕೆಯ ರಂಗನ್ನು ಮತ್ತಷ್ಟು ಹೆಚ್ಚಿಸಿದರು. ಹುಲಿವೇಷ ಕುಣಿತ ಕಂಡು ಖುಷಿಪಟ್ಟ ಹರ್ಭಜನ್ ಸಿಂಗ್ ಪಿಲಿನಲಿಕೆಯ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರು. ಈ ವೇಳೆ ಹುಲಿ ಕುಣಿತದ ಬಗ್ಗೆ ಸ್ಟಾರ್ ಕ್ರಿಕೆಟಿಗನಿಗೆ ಸುನೀಲ್ ಶೆಟ್ಟಿ ಮಾಹಿತಿ ನೀಡಿದರು. ಹರ್ಭಜನ್ ಸಿಂಗ್ ಆಗಮಿಸುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಜನರು ಕರತಾಡನದ ಜೊತೆಗೆ ಮೊಬೈಲ್ ಲೈಟ್ ಆನ್ ಮಾಡಿ ಕ್ರಿಕೆಟಿಗನ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಿದರು. ಒಟ್ಟು ಹತ್ತು ತಂಡಗಳ ಪಿಲಿನಲಿಕೆ ಸ್ಪರ್ಧೆಯಲ್ಲಿ ಎರಡು ತಂಡಗಳ ಹುಲಿಕುಣಿತವನ್ನು ಅವರು ವೀಕ್ಷಿಸಿದರು.
Laxmi News 24×7