Breaking News

ದಸರಾ ಹಬ್ಬದ ಪ್ರಯುಕ್ತ ನಡೆದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಸಮಾರಂಭದಲ್ಲಿ ಶಾಸಕ ಬಿ ಎಸ್ ವಿಜಯೇಂದ್ರ ಭಾಗವಹಿಸಿದ್ದರು.

Spread the love

ಚಿಕ್ಕೋಡಿ: ಆದಷ್ಟು ಬೇಗನೆ ಬಿಜೆಪಿ ಪಕ್ಷಕ್ಕೆ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ನೇಮಕಾತಿ ಮಾಡಲಾಗುವುದು ಎಂದು ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ಹೇಳಿದರು.

ದಸರಾ ಹಬ್ಬದ ಪ್ರಯುಕ್ತ ಹುಕ್ಕೇರಿ ಹಿರೇಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಚಂದ್ರಶೇಖರ ಶಿವಾಚಾರ್ಯರ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.ಯಡಿಯೂರಪ್ಪ ಹಿರಿಯರು ಇದ್ದಾರೆ. ಅವರು ಯಾವಾಗ ಬೇಕಾದರೂ ರಾಜ್ಯ ಪ್ರವಾಸ ಮಾಡಬಹುದು. ಅವರಿಗೆ ನೀವು ಪ್ರವಾಸ ಮಾಡಬೇಡಿ ಎಂದು ಯಾರೂ ಹೇಳಿಲ್ಲ. ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡ್ತಾರೆ. ಯಾರೂ ಕೂಡ ಅದನ್ನ ತಡೆಯುವ ಪ್ರಯತ್ನ ಮಾಡೋದಿಲ್ಲ, ಮಾಡುವ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.

ರೈತರ ಬೆಳೆಹಾನಿ ಪರಿಹಾರ ಘೋಷಿಸಲಿ:ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನಾನು ಹೆಚ್ಚಿಗೆ ಹೇಳೋಕೆ ಇಷ್ಟಪಡಲ್ಲ. ಸರ್ಕಾರ ಬಂದು ಐದು ತಿಂಗಳು ಕಳೆದಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದು ರೈತರು ಸಂಕಷ್ಟದಲ್ಲಿದ್ದಾರೆ, ವಿದ್ಯುತ್ ಅಭಾವ ಇದೆ. ರೈತರಿಗೆ ಮಧ್ಯಂತರ ಬೆಳೆಹಾನಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಬರಪೀಡಿತ ತಾಲೂಕು ಘೋಷಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಸರ್ಕಾರ ಬಂದು ಇಷ್ಟು ದಿನ ಆದರೂ ಅಭಿವೃದ್ಧಿಗೆ ಒಂದು ರೂ‌. ಅನುದಾನ ಯಾವುದೇ ಶಾಸಕರಿಗೆ ಕೊಟ್ಟಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ಕಾರ ವಿಫಲವಾಗಿದೆ ಸಹಜವಾಗಿ ಆಡಳಿತ ಪಕ್ಷದ ಶಾಸಕರ ಅಸಮಾಧಾನ ಎದ್ದು ಕಾಣುತ್ತಿದೆ ಎಂದು ಹೇಳಿದರು.

ರೈತರ ಸಮಸ್ಯೆ ಕಡೆಗಣನೆ:ಡಿಸಿಎಂ ಡಿಕೆಶಿ ಭೇಟಿ ವೇಳೆ ಶಾಸಕರು ಗೈರು ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಆಡಳಿತಾರೂಢ ಪಕ್ಷದ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ. ಸರ್ಕಾರದಲ್ಲಿ ಏನೂ ಬೇಕಾದರೂ ಆಗಬಹುದು ಅಂತಾ ಸಾಮಾನ್ಯ ಜನರು ಮಾತನಾಡುತ್ತಿದ್ದಾರೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದನೆ ಮಾಡುತ್ತಿಲ್ಲ. ರಾಜ್ಯದ ನಾನಾ ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳೋದನ್ನು ನೋಡುತ್ತಿದ್ದೇವೆ. ಸರ್ಕಾರದ ಒಳ ಕಚ್ಚಾಟ ಎಲ್ಲ ಮರೆತು ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ