Breaking News

ಆರ.ಎಂ.ಪಿ ವೈದ್ಯರ ನಿರ್ಲಕ್ಷದಿಂದ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾಳೆ.

Spread the love

ಆರ್. ಎಂ. ಪಿ. ವೈದ್ಯ ಮಹಾವೀರ ಬಂಕಾಪುರೆಯವರ ನಿರ್ಲಕ್ಷ್ಯದಿಂದ ಗರ್ಭಿಣಿ ಮಹಿಳೆ ಸಾವನಪ್ಪಿದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣದಲ್ಲಿ ನಡೆದಿದೆ.

ಮೃತ ಮಹಿಳೆಯ ಹೆಸರು ಶೇಜಲ ಅನಿಕೇತ್ ಮಾಳಿ (22) ಎಂದು ತಿಳಿದು‌ ಬಂದಿದೆ.‌ಆರ.ಎಂ.ಪಿ ವೈದ್ಯ ಬಂಕಾಪುರೆಯ ನಿರ್ಲಕ್ಷದಿಂದಲೇ ಆಗಿದೆ ಎಂದು ಪ. ಪಂ. ಸದಸ್ಯ ಪ್ರದೀಪ ಮಾಳಿ ಜತೆಗೆ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.ಶೇಜಲ್ ಮಾಳಿ ಎಂಬ ಗರ್ಭಿಣಿ ಮಹಿಳೆಯು ಬಂಕಾಪುರೆಯ ಆಸ್ಪತ್ರೆಗೆ ಹೆರಿಗೆಗಾಗಿ ಹೋಗಿದ್ದಳು.

ಈ ನಡುವೆ ಗರ್ಭಿಣಿಯ ಸ್ಥಿತಿ ಚಿಂತಾಜನಕವಾದಾಗ, ಗರ್ಭಿಣಿಯ ಹೆರಿಗೆಯನ್ನು ಅರ್ಧಕ್ಕೆ ಬಿಟ್ಟು ಮಹಿಳೆಯನ್ನು ಪಕ್ಕದ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಿದರು ಇದರಿಂದಾಗಿ ನನ್ನ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಪತಿ ಅನಿಕೇತ್ ಆರೋಪಿಸಿದ್ದಾರೆ.

ವೈದ್ಯ ಮಹಾವೀರ ಬಂಕಾಪೂರೆ ಮಾತನಾಡಿ ನಾನು ಇದುವರೆಗೆ ೫ ಸಾವಿರ ಗರ್ಭಿಣಿಯರಿಗೆ ಹೇರಿಗೆ ಮಾಡಿದೇನೆ..ಶೇಜಲ್ ಅವರ ಹೆರಿಗೆ ಸಂಧರ್ಭದಲ್ಲಿ ಅವರ ಪರಿಸ್ಥಿತಿ ಗಂಭೀರವಾದಾಗ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸಿದೇನೆ ಎಂದರು.

ಗರ್ಭಿಣಿ ಸಾವನ್ನಪ್ಪುತ್ತಿದಂತೆ ಕುಟುಂಬಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಜತೆ ಸೇರಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ಸಾವಿಗೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಈ ಬಗ್ಗೆ ತನಿಖೆಯಾಗಬೇಕು ಇಲ್ಲವಾದಲ್ಲಿ ನಾವು ಆಸ್ಪತ್ರೆ ಎದುರುನೇ ಪ್ರತಿಭಟನೆ ಮಾಡುವುದಾಗಿ ಪಟ್ಟಣ ಪಂಚಾಯಿತಿ ಸದಸ್ಯ ಮಾಳಿ ಹೇಳಿದರು.

ಈ ಮಹಿಳೆಗೆ ಹೆರಿಗೆ ಮಾಡಿಸುವಾಗ ಆಕೆಯ ಸ್ಥಿತಿ ಗಂಭೀರವಾದ ಕಾರಣ, ಅವರು ಮಹಿಳೆಯನ್ನು ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸ ಲಾಗಿತ್ತುಎಂದರು.

ಘಟನೆ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ.
ತಾಲೂಕಾ ವೈದ್ಯಾಧಿಕಾರಿ ಡಾ! ಭಾಗಾಯಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಆರ.ಎಂ.ಪಿ ವೈದ್ಯರ ನಿರ್ಲಕ್ಷದಿಂದ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾಳೆ.ಈ ಆರ.ಎಂ.ಪಿ ವೈದ್ಯನ ಬಗ್ಗೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳತ್ತಾರ ಕಾದು ನೋಡಬೇಕು‌.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ