Breaking News

ಅಭ್ಯಾಸ ಪಂದ್ಯಕ್ಕೆ ಎರಡು ದಿನ ಮುಂಚಿತವಾಗಿ ಇಂಡಿಯಾಕ್ಕೆ ಬಂದ ಬಾಬರ್​ ಪಡೆ..

Spread the love

ಹೈದರಾಬಾದ್: ಏಕದಿನ ವಿಶ್ವಕಪ್​ಗೆ ಭಾರತ ಪ್ರವಾಸಕ್ಕೆ ವೀಸಾ ಸಿಕ್ಕಿಲ್ಲ ಎಂದು ಆರೋಪಿಸಿದ್ದ ಪಾಕಿಸ್ತಾನಕ್ಕೆ ಅಭ್ಯಾಸ ಪಂದ್ಯಕ್ಕೆ ಎರಡು ದಿನ ಮುಂಚಿತವಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಭಾರತ ಸರ್ಕಾರ ಪಾಕಿಸ್ತಾನ ತಂಡಕ್ಕೆ ಸೂಕ್ತ ಸಮಯಕ್ಕೆ ವೀಸಾ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಆದರೆ ಪಾಕಿಸ್ತಾನ ಕ್ರಿಕೆಟ್​ ತಂಡದ ನಿರ್ವಹಣಾ ಕಮಿಟಿ​ ಮಾತ್ರ ಎರಡು ದಿನಗಳ ಹಿಂದೆ ವೀಸಾ ಸಮಸ್ಯೆ ಆಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಐಸಿಸಿಗೂ ಪತ್ರ ಬರೆದಿದ್ದರು. ಆದರೆ ಈಗ ಎಲ್ಲದಕ್ಕೂ ಪರಿಹಾರ ಸಿಕ್ಕಿದ್ದು ಇಂದು ತಂಡ ಭಾರತಕ್ಕೆ ಬಂದಿಳಿದಿದೆ.

ಶುಕ್ರವಾರ ಉಪ್ಪಲ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 6 ರಂದು ನೆದರ್ಲೆಂಡ್ಸ್ ವಿರುದ್ಧ ವಿಶ್ವಕಪ್​ನ ತನ್ನ ಮೊದಲ ಪಂದ್ಯವನ್ನು ಆಡಲಿದೆ. 1992 ರಲ್ಲಿ ನಾಯಕ ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ ಕೊನೆಯ ಬಾರಿಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿತ್ತು. ಮೆನ್ ಇನ್ ಗ್ರೀನ್ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು 2016ರಲ್ಲಿ ಭಾರತಕ್ಕೆ ಬಂದಿತ್ತು. ಅದಾದ ನಂತರ ರಾಜತಾಂತ್ರಿಕ ಕಾರಣಗಳಿಂದ ಉಭಯ ತಂಡಗಳು ದೇಶಗಳಿಗೆ ಹೋಗಿ ಆಡಿರಲಿಲ್ಲ. ಈ ಬಾರಿಯ ಏಷ್ಯಾಕಪ್​ ಪಾಕಿಸ್ತಾನ ಆಯೋಜಿಸ ಬೇಕಾಗಿದ್ದರೂ, ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡುವುದಿಲ್ಲ ಎಂಬ ಕಾರಣಕ್ಕೆ ಹೈಬ್ರಿಡ್​ ಮಾದರಿಯನ್ನು ಪಂದ್ಯಗಳನ್ನು ಆಡಿಸಲಾಯಿತು.


Spread the love

About Laxminews 24x7

Check Also

ಆಪರೇಷನ್ ಸಿಂಧೂರ್ ನಡೆಸುತ್ತಿರುವ ಯೋಧರಿಗೆ ಬೆಂಬಲ… ರಾಜ್ಯ ಕಾಂಗ್ರೆಸ್’ನಿಂದ ಬೃಹತ್ “ತಿರಂಗಾ ರ್ಯಾಲಿ”

Spread the love ಆಪರೇಷನ್ ಸಿಂಧೂರ್ ನಡೆಸುತ್ತಿರುವ ಯೋಧರಿಗೆ ಬೆಂಬಲ… ರಾಜ್ಯ ಕಾಂಗ್ರೆಸ್’ನಿಂದ ಬೃಹತ್ “ತಿರಂಗಾ ರ್ಯಾಲಿ” ಪೆಹಲ್’ಗಾಮ್’ನಲ್ಲಿ ಉಗ್ರರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ