Breaking News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್‌ ಹಾರಾಟ: ತನಿಖೆ ಪ್ರಾರಂಭ

Spread the love

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಪ್ರದೇಶದಲ್ಲಿ ಅಪರಿಚಿತ ಡ್ರೋನ್​ ಹಾರಾಟ ಮಾಡಿದೆ.

ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಪರಿಚಿತ ಡ್ರೋನ್​ ಹಾರಾಟವನ್ನು ಪತ್ತೆ ಮಾಡಲು ತನಿಖೆಯನ್ನು ಆರಂಭಿಸಲಾಗಿದೆ.

ರನ್ ವೇ ಪ್ರದೇಶದಿಂದ 6 ನಾಟಿಕಲ್ ದೂರದಲ್ಲಿ ಡ್ರೋನ್​ ಹಾರಾಟ ಕಂಡು ಬಂದಿದೆ. ಡ್ರೋನ್​ ಹಾರಾಟ ಕಂಡು ಬಂದ ತಕ್ಷಣವೇ ವಿಮಾನದ ಪೈಲಟ್ ಎಟಿಸಿಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತ ಸಾಕಷ್ಟು ಭದ್ರತೆ ಇದ್ದರೂ ಅಪರಿಚಿತ ಡ್ರೋನ್​ ಹಾರಾಟ ಕೆಲಕಾಲ ಆತಂಕದ ಉಂಟುಮಾಡಿತ್ತು. ಅಪರಿಚಿತ ಡ್ರೋನ್​ ಪತ್ತೆ ಮಾಡುವ ಕಾರಣಕ್ಕೆ ಪೊಲೀಸರಿಗೆ ದೂರು ಸಹ ನೀಡಲಾಗಿದ್ದು, ತನಿಖೆ ಪ್ರಾರಂಭವಾಗಿದೆ.

ನಕಲಿ ಪಾಸ್​ಪೋರ್ಟ್​ ಮೂಲಕ ವಿದೇಶಕ್ಕೆ ತೆರಳುತ್ತಿದ್ದವನ ಬಂಧನ: ಇತ್ತೀಚಿಗೆ, ನಕಲಿ ಪಾಸ್​ಪೋರ್ಟ್​ ಮೂಲಕ ವಿದೇಶಕ್ಕೆ ತೆರಳುತ್ತಿದ್ದವನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದರು. ನೇಪಾಳ ಮೂಲದ ಉತ್ತಮ್ ಹಮಾಲ್ ಬಂಧಿತ ಆರೋಪಿ. ಬಂಧಿತ ಉತ್ತಮ್ ಹಮಾಲ್ ಬೆಂಗಳೂರಿನಿಂದ ಬ್ಯಾಂಕಾಕ್​ಗೆ ತೆರಳುತ್ತಿದ್ದ. ನೇಪಾಳ ಮೂಲದವನಾಗಿದ್ದರು ಕೇರಳ ಮೂಲದವನು ಎಂದು ನಕಲಿ ಪಾಸ್​ಪೋರ್ಟ್ ‌ಮಾಡಿಸಿಕೊಂಡಿದ್ದ. ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡು ಬ್ಯಾಂಕಾಕ್​ಗೆ ಹಾರಲು ಯತ್ನ ನಡೆಸಿದ್ದ.

ಆದರೆ, ಅನುಮಾನ ಬಂದು ಇಮಿಗ್ರೇಷನ್​ ಅಧಿಕಾರಿಗಳು ವಶಕ್ಕೆ ಪಡೆದು ಏರ್ಪೋರ್​ಪೋರ್ಟ್​ ಪೊಲೀಸರಿಗೆ ಒಪ್ಪಿಸಿದ್ದರು. ಇನ್ನು ತನ್ನ ಜೊತೆಯಲ್ಲಿ ಮತ್ತಿಬ್ಬರಿಗೆ ಕೆಲಸ‌ ಕೊಡಿಸುವುದಾಗಿ‌ ಬಂಧಿತ ಆರೋಪಿ ಕರೆದುಕೊಂಡು ಹೋಗುತ್ತಿದ್ದ ಎನ್ನಲಾಗಿತ್ತು. ಭಾರತ ಮೂಲದ ಮಹಿಳೆ ಹಾಗೂ ನೇಪಾಳಿ ಮೂಲದ ಮಹಿಳೆ ಜೊತೆ ಆರೋಪಿ ತೆರಳುತ್ತಿದ್ದ ಎಂಬುದು ತಿಳಿದುಬಂದಿತ್ತು. ತಲಾ ಒಬ್ಬೊಬ್ಬರಿಂದ 8 ಲಕ್ಷ ಹಾಗೂ 1.5 ಲಕ್ಷ ಹಣ ಪಡೆದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್​ಗೆ ತೆರಳಲು ಯತ್ನಿಸಿದ ವೇಳೆ ಬಂಧಿಸಲಾಗಿತ್ತು. ಆರೋಪಿಯನ್ನ ಬಂಧಿಸಿ ಮತ್ತಿಬ್ಬರನ್ನು ಪೊಲೀಸರು ವಾಪಸ್ ಕಳುಹಿಸಿದ್ದರು.

ನಕಲಿ ಪಾಸ್ ಪೋರ್ಟ್ ಜಾಲ ಪ್ರಕರಣ: ನಕಲಿ‌ ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ವಿದೇಶಿಯರಿಗೆ ಪಾಸ್ ಪೋರ್ಟ್ ಮಾಡಿಕೊಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದ ಪೊಲೀಸರು 9 ಮಂದಿ ಆರೋಪಿಗಳನ್ನು (ಫೆಬ್ರವರಿ 1-2023) ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಿಚಾರಣೆ ವೇಳೆ ಸಿಕ್ಕಿದ ಸುಳಿವಿನ ಮೇರೆಗೆ ಗುಜರಾತ್ ಮೂಲದ‌ ಪ್ರಮುಖ ಆರೋಪಿಯನ್ನು ಬಂಧಿಸಿದ್ದರು. ಗುಜರಾತ್ ಮೂಲದ ಶಿಬು ಬಂಧಿತ ಆರೋಪಿ ಎಂದು ತಿಳಿದುಬಂದಿತ್ತು.


Spread the love

About Laxminews 24x7

Check Also

ಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಪ್ರಮುಖವಾಗಿ ಪಕ್ಷದ ಸಂಘಟನೆ ವಿಷಯದಲ್ಲಿ ಚರ್ಚೆ

Spread the loveಬೆಂಗಳೂರು, ಜುಲೈ 7: ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ