Breaking News

ಬೆಳಗಾವಿಯಲ್ಲಿ ಅಕ್ಕಲಕೋಟ ಸ್ವಾಮಿ ಸಮರ್ಥ‌ ಮಹಾರಾಜರ ಮಂದಿರದ ಪ್ರತಿರೂಪ ನಿರ್ಮಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

Spread the love

ಬೆಳಗಾವಿ: ಇಲ್ಲಿಯ ಸೋಮನಾಥ ನಗರದ ಜೈ ಕಿಸಾನ್ ಹೋಲ್​ಸೇಲ್ ಬಾಜಿ ಮಾರ್ಕೆಟ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯು 35ನೇ ವರ್ಷದ ಗಣೇಶೋತ್ಸವ ನಿಮಿತ್ತ ಈ ಬಾರಿ ಮಹಾರಾಷ್ಟ್ರದ ಅಕ್ಕಲಕೋಟ ಸ್ವಾಮಿ ಸಮರ್ಥ‌ ಮಹಾರಾಜರ ಮಂದಿರದ ಪ್ರತಿರೂಪವನ್ನು ನಿರ್ಮಿಸಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದೆ.

 

ಮಂದಿರದ ಒಳಗಡೆ ಸ್ವಾಮಿ ಸಮರ್ಥ‌ ಮಹಾರಾಜರ ಮೂರ್ತಿ ಹಾಗೂ ಅವರ ಜೀವನದ ವಿವಿಧ ಕಾಲಘಟ್ಟದ ಭಾವಚಿತ್ರಗಳು ಕಣ್ಮನ ಸೆಳೆಯುತ್ತಿವೆ. ಇನ್ನು ರಾತ್ರಿ ಹೊತ್ತು ಇಡೀ ಮಂದಿರವು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಲ್ಲದೇ ಅಕ್ಕಲಕೋಟ ಮಂದಿರದಲ್ಲಿ ಇರುವಂತೆ ಇಲ್ಲಿಯೂ ಆಲದ ಮರವೊಂದನ್ನು ಕೃತಕವಾಗಿ ಅಳವಡಿಸಲಾಗಿದ್ದು, ಇದಕ್ಕೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿ ದಾರವನ್ನು ಮರಕ್ಕೆ ಕಟ್ಟುತ್ತಿದ್ದಾರೆ.

ಮಂಡಳಿಯವರು ಎರಡು ತಿಂಗಳಿನಿಂದ ಅಕ್ಕಲಕೋಟ ಮಾದರಿಯ ಮಂದಿರ ನಿರ್ಮಿಸಲು ಸಿದ್ಧತೆ ಕೈಗೊಂಡಿದ್ದರು. ಬೆಳಗಾವಿಯ ಕಲಾವಿದ ವಸಂತ ಪಾಟೀಲ, ಮಹಾರಾಷ್ಟ್ರದ ಲಲಿತ್ ಚಿಕಿತ್ಸಕರ್ ಹಾಗೂ ಅಲವಿನ್ ಫರ್ನಾಂಡಿಸ್ ಅವರು ಈ ಸುಂದರ ಮಂದಿರ ತಯಾರಿಸಿದ್ದಾರೆ. ಮತ್ತೊಂದು ವಿಶೇಷತೆ ಎಂದರೆ ಮುಸ್ಲಿಂ ಧರ್ಮಿಯರು ಸೇರಿ ಎಲ್ಲರೂ ಕೂಡ ಇದಕ್ಕೆ ಕೈ ಜೋಡಿಸುವ ಮೂಲಕ ಸಾಮರಸ್ಯತೆ ಮೆರೆದಿದ್ದಾರೆ.

ಇನ್ನು‌ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯವನ್ನೂ‌ ಮಾಡುತ್ತಾ ಬಂದಿರುವ ಈ ಮಂಡಳಿಯು, ವಿಕಲಚೇತನರ ಸಂಸ್ಥೆ ಮತ್ತು ಮಹೇಶ್ವರಿ ಅಂಧ ಮಕ್ಕಳ ಶಾಲೆ, ನಂದನ ಮಕ್ಕಳ ಧಾಮಗಳಿಗೆ 12 ತಿಂಗಳೂ ಉಚಿತವಾಗಿ ತರಕಾರಿ‌ ಪೂರೈಸುವ ಕಾಯಕ ಮಾಡುತ್ತಿದೆ. ಅಲ್ಲದೇ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರವನ್ನೂ ಆಯೋಜಿಸುವ ಮೂಲಕ‌ ಸಾಮಾಜಿಕ ಕಾಳಜಿ ಮೆರೆಯುತ್ತಿದೆ.

 


Spread the love

About Laxminews 24x7

Check Also

ಗರ್ಭಿಣಿಯಾದಳೆಂದು ಪತ್ನಿಯನ್ನೇ ಕೊಲೆ ಮಾಡಿದ ಪತಿ!

Spread the loveಚಾಮರಾಜನಗರ : ಗರ್ಭಿಣಿಯೊಬ್ಬರನ್ನು ತಾಳಿ ಕಟ್ಟಿದ ಪತಿಯೇ ಕೊಲೆ ಮಾಡಿರುವ ಘಟನೆ ತಾಲೂಕಿನ ಡೊಳ್ಳಿಪುರದ ತೋಟದ ಮನೆಯಲ್ಲಿ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ