Breaking News

ಗೌರವಯುತ ಜೀವನ ನಡೆಸಲು ನೆರವಿಗೆ ಬಾರದ ಪದಕ; ತಿನ್ನಲು ಕೂಳಿಲ್ಲದಿದ್ದರೂ ಕುಂದದ ಕುಸ್ತಿ ಪ್ರೇಮ; ಪೈಲ್ವಾನ್ ಗೆ ಬೇಕಿದೆ ಸಹಾಯ ಹಸ್ತ!

Spread the love

ಗೌರವಯುತ ಜೀವನ ಮಾಡಬೇಕೆಂದು ಬಯಸಿದ ಕುಸ್ತಿ ಪಟುವೊಬ್ಬರಿಗೆ ಯಾವುದೇ ನೆರವು ಸಿಗದ ಕಾರಣ, ಹೊಟ್ಟೆಪಾಡಿಗೆ ಹಮಾಲಿ ಮಾಡಿಕೊಂಡು ಜೀವನ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಬಾಗಲಕೋಟೆ: ಗೌರವಯುತ ಜೀವನ ಮಾಡಬೇಕೆಂದು ಬಯಸಿದ ಕುಸ್ತಿ ಪಟುವೊಬ್ಬರಿಗೆ ಯಾವುದೇ ನೆರವು ಸಿಗದ ಕಾರಣ, ಹೊಟ್ಟೆಪಾಡಿಗೆ ಹಮಾಲಿ ಮಾಡಿಕೊಂಡು ಜೀವನ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

ಇದು ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಅಪ್ಪಾಸಿ ತೇರದಾಳ ಅವರ ಕಥೆ. 42 ವರ್ಷದ ಅಪ್ಪಾಸಿ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹೆಸರಾಂತ ಜಗಜಟ್ಟಿಗಳನ್ನು ಮಣ್ಣುಮುಕ್ಕಿಸಿದ್ದಾರೆ. ಆದರೆ ಈಗ ದಿನಗೂಲಿ ಕೆಲಸ ಮಾಡುತ್ತಾ ಮುಧೋಳ ಪೇಟೆಯ ಮಾರುಕಟ್ಟೆಯಲ್ಲಿ ಗೋಣಿ ಚೀಲ ತರಕಾರಿ ಹೊತ್ತುಕೊಂಡು ಪ್ರತಿನಿತ್ಯ ಅಲ್ಪ ಸಂಪಾದನೆ ಮಾಡುತ್ತಿದ್ದಾರೆ. ಒಡಿಶಾ, ಛತ್ತೀಸ್ಗಢ, ಜಾರ್ಖಂಡ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಣಿಪುರ, ಹರಿಯಾಣ, ಪಂಜಾಬ್ ಮೊದಲಾದೆಡೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಮೈಸೂರಿನ ದಸರಾ ಕ್ರೀಡಾಕೂಟ ಸೇರಿದಂತೆ ಕರ್ನಾಟಕದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇತ್ತೀಚೆಗೆ, ಅವರು ಮಲೇಷ್ಯಾದಲ್ಲಿ ಅಂತರರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಆಯ್ಕೆಯಾದರು, ಆದರೆ ಅವರ ಆರ್ಥಿಕ ಸ್ಥಿತಿಯಿಂದ ಅಲ್ಲಿಗೆ ಹೋಗಲಾಗಲಿಲ್ಲ. ವೃತ್ತಿಯಲ್ಲಿ ಮಾಸ್ಟರ್ ಆಗಿರುವ ಅಪ್ಪಾಸಿ, ದುನಿಯಾ ವಿಜಯ್ ಸೇರಿದಂತೆ ಹಲವಾರು ಕನ್ನಡ ನಟರಿಗೆ ಚಲನಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ ತರಬೇತಿ ನೀಡಿದ್ದಾರೆ. ದುನಿಯಾ ವಿಜಯ್ 2018 ರ ಕನಕ ಚಿತ್ರದಲ್ಲಿನ ಪಾತ್ರಕ್ಕಾಗಿ ಅಪ್ಪಾಸಿ ಅವರಿಂದ ಕುಸ್ತಿಯ ಪಟ್ಟುಗಳನ್ನು ಕಲಿತರು.

“ನಾನು ವಿಜಯ್ಗೆ ಪಾತ್ರಕ್ಕಾಗಿ ವಾರಗಟ್ಟಲೆ ತರಬೇತಿ ನೀಡಿದ್ದೇನೆ” ಎಂದು ಅವರು ಹೇಳಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ