Breaking News

ಸೂರತ್​ನ ಉದ್ಯಮಿ ಮನೆಯಲ್ಲಿ 600 ಕೋಟಿ ರೂ ಬೆಲೆಯ ವಜ್ರದ ಗಣಪತಿ ಪ್ರತಿಷ್ಠಾಪನೆ!

Spread the love

ಸೂರತ್​ (ಗುಜರಾತ್​): ಗುಜರಾತ್​ ರಾಜ್ಯದ ಸೂರತ್​ನಲ್ಲಿ ಉದ್ಯಮಿಯೊಬ್ಬರು ತಮ್ಮ ನಿವಾಸದಲ್ಲಿ ಅಪರೂಪದ ಮತ್ತು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಗಣಪನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.

ಕನುಭಾಯಿ ರಾಮ್​ಜಿಭಾಯಿ ಅಸೋದರಿಯಾ ಎಂಬುವವರು ಬರೋಬ್ಬರಿ 600 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಗಣಪನನ್ನು ಕೂರಿಸಿದ್ದಾರೆ. ವಜ್ರದ ವ್ಯಾಪಾರಿಯಾಗಿರುವ ಇವರು 15 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಬೆಲ್ಜಿಯಂಗೆ ಹೋಗಿದ್ದರು. ಅಲ್ಲಿಂದ ಕಚ್ಚಾ ವಜ್ರಗಳನ್ನು ತಂದಿದ್ದರು.

ಈ ವೇಳೆ ಅನುಭಾಯಿ ಅವರ ತಂದೆಗೆ ಮನೆಗೆ ತಂದಿರವ ವಜ್ರದಲ್ಲಿ ಗಣಪನ ಮೂರ್ತಿ ಇದೆ ಎಂಬ ಕನಸುಬಿದ್ದಿತ್ತಂತೆ. ನಂತರ ಹೋಗಿ ನೋಡಿದಾಗ ಇದು ಪತ್ತೆಯಾಗಿದೆ ಎಂದು ಕುನಭಾಯಿ ಹೇಳುತ್ತಾರೆ. ಈ ಗಣಪತಿ ಮೂರ್ತಿ 182.3 ಕ್ಯಾರೆಟ್​ ವಜ್ರದಾಗಿದ್ದು, 36.5ಗ್ರಾಂ ತೂಕವಿದೆ. ಇದರ ಮಾರುಕಟ್ಟೆ ಬೆಲೆ 600 ಕೋಟಿ ರೂ ಎನ್ನಲಾಗಿದೆ. ಸೂರತ್‌ನಲ್ಲಿ ಅತ್ಯಂತ ಹೆಚ್ಚಿನ ಬೆಲೆಬಾಳುವ ಗಣಪನ ಮೂರ್ತಿ ಇದಾಗಿದೆ. ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಿಂದಲೂ ಇದು ಪ್ರಮಾಣಿಕರಿಸಲ್ಪಟ್ಟಿದೆ.

 600 ಕೋಟಿ ಬೆಲೆಯ ವಜ್ರದ ಗಣಪಈ ಕುರಿತು ಮಾತನಾಡಿರುವ ಉದ್ಯಮಿ ಕುನಭಾಯಿ, ನಮ್ಮದು ಕರಮ್​ ಎಕ್ಸಪೋರ್ಟ್​ ಡೈಮಂಡ್ ಎಂಬ ಕಂಪನಿ ಇದೆ. ಮನೆಯಲ್ಲಿ ಪ್ರತಿಷ್ಠಾಪಿಸಿರುವ ಈ ಗಣಪತಿಯು ವಜ್ರದ ಗಣಿಯಲ್ಲಿ ದೊರೆತಿದೆ. ಇದು ನೈಸರ್ಗಿಕವಾಗಿಯೇ ರೂಪುಗೊಂಡಿದೆ. ವರ್ಲ್ಡ್​ ಬುಕ್​ ಆಫ್​ ರೆಕಾರ್ಡ್​ ಸಾಬೀತುಪಡಿಸಿದೆ. ವಿಷೇಶವಾದ ಗಣೇಶವಾದ್ದರಿಂದ ಯೂನಿಕ್​ ಡೈಮಂಡ್​ ಆಫ್​ ವರ್ಲ್ಡ್​ ಎಂದು ಕರೆಯಲಾಗಿದೆ. ಕರಮ್​ ಡೈಮಂಡ್​ ಗಣೇಶ ಎಂದು ಕೂಡ ಕರೆಯಲಾಗುತ್ತದೆ. ಇದು ಕೊಹಿನೂರು ವಜ್ರಕ್ಕಿಂತಲೂ ದೊಡ್ಡದಾಗಿದೆ ಎಂದು ಉದ್ಯಮಿ ಅನುಭಾಯಿ ರಾಮ್​ಜಿಭಾಯಿ ಹೇಳಿದ್ದಾರೆ.

ಬೆಂಗಳೂರಲ್ಲಿ ನೋಟು, ನಾಣ್ಯಗಳಲ್ಲಿ ಗಣಪನ ದೇಗುಲ ಅಲಂಕಾರ: ಬೆಂಗಳೂರಿನಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿರುವ ಸತ್ಯಗಣಪತಿ ದೇವಸ್ಥಾನದಲ್ಲಿ ನೋಟು ಮತ್ತು ನಾಣ್ಯಗಳಿಂದ ದೇವಸ್ಥಾನವನ್ನು ಅಲಂಕರಿಸಿಲಾಗಿದೆ. ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ ಸುಮಾರು 56 ಲಕ್ಷ ಮೌಲ್ಯದ 5, 10 ಮತ್ತು 20 ರೂಪಾಯಿ ನಾಣ್ಯಗಳು ಮತ್ತು 10, 20, 50, 100, 200 ಮತ್ತು 500 ರೂಪಾಯಿಗಳ ನೋಟುಗಳೊಂದಿಗೆ ಹೂವಿನಂತೆ ಮಾಲೆಗಳನ್ನು ಮಾಡಿ ಅತ್ಯಾಕರ್ಷಕವಾಗಿ ಅಲಂಕಾರ ಮಾಡಲಾಗಿದೆ. ಸುಮಾರು 2.5 ಕೋಟಿ ರೂ ಮೌಲ್ಯದ ನೋಟು ಮತ್ತು 56 ಲಕ್ಷ ರೂ ಮೌಲ್ಯದ ನಾಣ್ಯಗಳ ಮೂಲಕ ಅಲಂಕಾರ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ 150 ಜನ ಅಲಂಕಾರ ಕೆಲಸದಲ್ಲಿ ತೊಡಗಿದ್ದರು. ಭದ್ರತೆ ಜೊತೆ ಇಡೀ ದೇವಾಲಯದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.


Spread the love

About Laxminews 24x7

Check Also

ಅಡಿಕೆ ಸಾಗಿಸುತ್ತಿದ್ದ VRL ಲಾರಿ ತೋಟಕ್ಕೆ ಉರುಳಿ ಸಂಪೂರ್ಣ ಜಖಂ!

Spread the loveಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ