ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುವ ಅನಿವಾರ್ಯತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ನಡೆಸಬಹುದಾದ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಕನ್ನಡ ಚಲನಚಿತ್ರರಂಗದ ಸ್ಟಾರ್ ನಟರು ಕೂಡ ಈ ವಿಚಾರವಾಗಿ ದನಿ ಎತ್ತಿದ್ದಾರೆ.
ಇಂದು ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟಿ ಪೂಜಾ ಗಾಂಧಿ ಹಾಗೂ ನಿನ್ನೆ ನಟ ಜಗ್ಗೇಶ್ ಕಾವೇರಿ ಪರವಾಗಿ ಮಾತನಾಡಿದ್ದರು. ಈ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಬೇಕು, ಇದಕ್ಕಾಗಿ ನಾವು ಯಾವತ್ತೂ ಕನ್ನಡಿಗರೊಂದಿಗೆ ಇದ್ದೇವೆ ಎಂದು ಹೇಳಿಕೊಂಡಿದ್ದರು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಕಾವೇರಿ ಪರ ಕೂಗಿಗೆ ದನಿಗೂಡಿಸಿದ್ದಾರೆ.