ವೀಕ್ಷಕರೇ ಇಲ್ಲೊಬ್ಬ ಪೊಲೀಸ್ ವೃತ್ತ ನಿರೀಕ್ಷಕ ತಮ್ಮ ಕರ್ತವ್ಯದ ಜೊತೆಗೆ ಪರಿಸರ ಬಗ್ಗೆ ಅಪರೂಪ ಕಾಳಜಿ ತೋರಿಸುತ್ತಿರುವುದು ಒಂದು ವಿಶೇಷ ಸಂಗತಿ. ಹಾಗಾದರೆ ಈ ವರದಿ ಎಲ್ಲಿಯದು ಪೋಲಿಸ್ ವ್ರತ ನಿರೀಕ್ಷಕರು ಯಾರು ಎನ್ನುವುದು ತಿಳಿಯಲು ಈ ವರದಿ ತಪ್ಪದೆ ನೋಡಿ .
ಕೊರೋನಾ ಎಂದರೆ ಎಲ್ಲರೂ ಭಯಬೀಳುವುದು ಸಹಜ ಯಾಕೆಂದರೆ ಕಳೆದ ಎರಡು ವರ್ಷಗಳ ಹಿಂದೆ ಭಯಂಕರ ಅನುಭವವನ್ನು ನೀಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ ಕೊರೋನಾ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ ಜಗತ್ತಿನಾದ್ಯಂತ ಸಾವಿರಾರು ಜನ ಸಾವಾಗಿರುವುದನ್ನು ಕಂಡಿದ್ದೇವೆ ಆದರೂ ಕೂಡ ಜನರಿಗೆ ಇನ್ನೂ ಆಕ್ಸಿಜನ್ ಬಗ್ಗೆ ಮನವರಿಕೆಯಾಗದೆ ಮರಗಳ ಮೇಲೆ ದೌರ್ಜನ್ಯ ಎಸುಗುತ್ತಿರುವುದು ವಿಷಾದನೀಯ ವಿಷಯ.
ನಿನ್ನೆಯ ದಿನ ತಮ್ಮ ಕರ್ತವ್ಯ ಜೊತೆಗೆ ರಸ್ತೆ ಬದಿ ಇರುವ ಮರಗಳನ್ನು ಗಮನಿಸುತ್ತಾ ಹಾರೋಗೇರಿ ಪಟ್ಟಣವನ್ನು ಸಂಚರಿಸುತ್ತಿದ್ದಾಗ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಇರುವ ಒಂದು ಮರಕ್ಕೆ ನೂರಾರು ಮಳೆಗಳು ಪೋಸ್ಟರ್ಗಳು ಲೈಟ್ ಅಳವಡಿಸುವುದನ್ನು ಗಮನಿಸಿದ ಸಿಪಿಐ ರವೀಂದ್ರನ ಬಡಫಕೀರಪ್ಪಗೋಳ ಮರಕ್ಕೆ ಹೊಡೆದಿರುವ ಮಳೆಗಳನ್ನು ಕಿತ್ತು ತಮ್ಮ ಪರಿಸರ ಕಾಳಜಿಯನ್ನು ತೋರಿದ್ದಾರೆ.