Breaking News

ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಅವರ ತಂದೆ, ತಾಯಿ ಇಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದರು

Spread the love

ರಾಯಚೂರು: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ತಂದೆ ಯಶವೀರ್ ಸುನಕ್, ತಾಯಿ ಉಷಾ ಸುನಕ್ ಹಾಗೂ ಇನ್ಫೋಸಿಸ್​​ ಫೌಂಡೇಶನ್​ ಸಂಸ್ಥಾಪಕಿ ಸುಧಾ ಮೂರ್ತಿ ಇಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ್ದರು.

ಆರಂಭದಲ್ಲಿ ಗ್ರಾಮದ ಅಧಿದೇವತೆ ಶ್ರೀಮಂಚಾಲಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಯರ ಮೂಲಬೃಂದಾವನ ದರ್ಶನ ಪಡೆದು, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.

 ಮಂತ್ರಾಲಯಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ​ ರಿಷಿ ಸುನಕ್‌ ಪೋಷಕರುಇದಾದ ಬಳಿಕ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು. ಈ ವೇಳೆ ಪೀಠಾಧಿಪತಿಗಳು ರಿಷಿ ಸುನಕ್ ತಂದೆ-ತಾಯಿಯವರಿಗೆ ವಸ್ತ್ರ, ಫಲ, ಮಂತ್ರಾಕ್ಷತೆ ಹಾಗೂ ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಜತೆಗೆ ತಮ್ಮ ಪುತ್ರ ರಿಷಿ ಸುನಕ್‌ ಅವರಿಗೆ ರಾಯರ ಪವಿತ್ರವಾದ ಪ್ರಸಾದವನ್ನು ತಲುಪಿಸುವಂತೆ ಪೋಷಕರಿಗೆ ತಿಳಿಸಿದರು. ಈ ವೇಳೆ ಇನ್ಫೋಸಿಸ್​ನ ಸುಧಾ ಮೂರ್ತಿ ಅವರಿಗೂ ಫಲ, ಪುಷ್ಪ ಹಾಗೂ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವದಿಸಿದರು.

ಮಂತ್ರಾಲಯಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ​ ರಿಷಿ ಸುನಕ್‌ ಪೋಷಕರು


Spread the love

About Laxminews 24x7

Check Also

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹನ

Spread the loveಆಂಧ್ರ ಪ್ರದೇಶ: ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಯವರಂ ಬಳಿಯ ಪಲಕಲಾ ಎಂಬಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ