Breaking News

ನಾಗನೂರ: ಬ್ರಿಡ್ಜ್-ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

*ಮೂಡಲಗಿ*: ನಾಗನೂರು ಪಟ್ಟಣದ ಜನರ ಪ್ರಮುಖ ಬೇಡಿಕೆಯಾಗಿದ್ದ ಬ್ರೀಡ್ಜ್—ಕಂ-ಬ್ಯಾರೇಜ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 2.75 ಕೋಟಿ ರೂಪಾಯಿ ಅನುದಾನ ಬಂದಿದ್ದು, ಇದೇ ನವೆಂಬರ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರವಿವಾರದಂದು ತಾಲೂಕಿನ ನಾಗನೂರ ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನ ಹತ್ತಿರ ಸಣ್ಣ ನೀರಾವರಿ ಇಲಾಖೆಯಿಂದ ಹಳ್ಳಕ್ಕೆ ಅಡ್ಡಲಾಗಿ ಬ್ರೀಡ್ಜ್—ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಬ್ಯಾರೇಜ್ ನಿರ್ಮಾಣದಿಂದ ರೈತರು ಮತ್ತು ಸಾರ್ವಜನಿಕರ ಸಂಚಾರಕ್ಕಾಗಿ ಅನುಕೂಲವಾಗುವುದರ ಜೊತೆಗೆ ಬೇಸಿಗೆ ಕಾಲದಲ್ಲಿ ಅಂತರ್ಜಲ ಮಟ್ಟವು ಕೂಡಾ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಮಳೆಯ ಅಭಾವದಿಂದ ರೈತಾಪಿ ಜನರಿಗೆ ಸಂಕಷ್ಟವಾಗುವ ಸಮಯ ಎದುರಾಗಬಹುದು. ಕಳೆದ ಜೂನ, ಜುಲೈ ಮತ್ತು ಅಗಷ್ಟ ತಿಂಗಳಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಇದರಿಂದ ಹಿಡಕಲ್ ಜಲಾಶಯದಲ್ಲಿ ಪ್ರಸ್ತುತ 33 ಟಿ.ಎಂ.ಸಿ ನೀರು ಮಾತ್ರ ಸಂಗ್ರಹ ಇದೆ. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಜನರಿಗೆ ಬರಗಾಲದ ಛಾಯೆ ತಿಳಿದಿರಲಿಲ್ಲ, ಆದರೀಗ ಮಳೆಯ ತೀವ್ರ ಅಭಾವದಿಂದ ಕುಡಿಯುವ ನೀರಿಗೂ ಸಹ ಸಂಚಕಾರ ಬಂದಿದೆ. ಹಿಡಕಲ್ ಜಲಾಶಯದಿಂದ ಬೀಡುವ ನೀರನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ನೀರನ್ನು ಪೋಲು ಮಾಡಬೇಡಿ ಎಂದು ರೈತರಲ್ಲಿ ಕೋರಿಕೊಂಡರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದ ಮತದಾರರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದ 71 ಸಾವಿರ ಮತಗಳ ಮುನ್ನಡೆ ನೀಡುವ ಮೂಲಕ ರಾಜ್ಯದಲ್ಲಿ ದಾಖಲೆಯ ನಾಲ್ಕನೇ ಸ್ಥಾನ ಮುನ್ನಡೆ ನೀಡಿದ್ದೀರಿ. ಚುನಾವಣೆ ಪ್ರಚಾರದಲ್ಲಿ ಭಾಗಿಯಾಗದಿದ್ದರೂ ಸ್ಥಳೀಯ ಎಲ್ಲ ಸಮಾಜಗಳ ಮುಖಂಡರು, ಪಕ್ಷದ ಕಾರ್ಯಕರ್ತರು ನನ್ನ ಪರವಾಗಿ ಶ್ರಮಿಸಿ ಆಶೀರ್ವಾದ ಮಾಡಿದ್ದೀರಿ. ಅದಕ್ಕಾಗಿ ನಮ್ಮ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳಿಗೆ ಸದಾ ಚಿರಋಣಿಯಾಗಿರುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಈ ಸಂಧರ್ಭದಲ್ಲಿ ಹಿರಿಯ ಸಹಕಾರಿ ಧುರೀಣ ಬಿ.ಆರ್.ಪಾಟೀಲ, ಪ್ರಭಾ ಶುಗರ್ ನಿರ್ದೇಶಕರಾದ ಕೆಂಚನಗೌಡ ಪಾಟೀಲ, ಸಿದ್ದಲಿಂಗ ಕಂಬಳ್ಳಿ, ಮುಖಂಡರಾದ ಅಲ್ಲಪ್ಪ ಗುಡೇನವರ, ಗಜಾನನ ಯರಗಣವಿ, ಭೀಮಗೌಡ ಹೊಸಮನಿ, ಸುಭಾಸ ಪಡದಲ್ಲಿ, ಪರಸಪ್ಪ ಬಬಲಿ, ಮುತ್ತೇಪ್ಪ ಖಾನಪ್ಪನವರ, ಬಸವರಾಜ ಕರಿಹೋಳಿ, ಸತ್ತೇಪ್ಪ ಕರವಾಡಿ, ಸಿದ್ದಪ್ಪ ಯಾದಗೂಡ, ಯಮನಪ್ಪ ಕರಬನ್ನವರ, ಮಹಾದೇವ ನಾಯಿಕ ಮುಂತಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ