ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ 10 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ
ರಾಜ್ಯ ಸರ್ಕಾರ ಹಿರಿಯ 10 ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕನಿಕಾ ಸಿಕ್ರಿವಾಲ್, ಐಪಿಎಸ್ ಇವರನ್ನು ಅಪರಾಧ ತನಿಖಾ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಮಿಥುನ್ ಎಚ್.ಎನ್, ಐಪಿಎಸ್ ಅವರನ್ನು ಬೆಂಗಳೂರಿನ ವೈರ್ಲೆಸ್ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ.ರೋಹನ್ ಜಗದೀಶ್, ಐಪಿಎಸ್ ಅವರನ್ನು ಮುಂದಿನ ಆದೇಶದವರೆಗೆ ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತರಾಗಿ (ಕಾನೂನು ಮತ್ತು ಸುವ್ಯವಸ್ಥೆ) ನೇಮಿಸಲಾಗಿದೆ.
ಅದೇ ರೀತಿ ಐಪಿಎಸ್ ಅಧಿಕಾರಿ ಕುಶಾಲ್ ಚೌಕ್ಸೆ ಗುಪ್ತಚರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಒಟ್ಟಾರೆಯಾಗಿ 10 ಮಂದಿ ಐಪಿಎಸ್ ಅಧಿಕಾರಿ’ಗಳನ್ನು ವಿವಿಧ ಸ್ಥಳಗಳಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.