Breaking News

ಹೆಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏನೂ ತೊಂದರೆ ಇಲ್ಲ ಎಂದ ಸುತ್ತೂರು ಶ್ರೀಗಳು

Spread the love

ಬೆಂಗಳೂರು : ಅನಾರೋಗ್ಯದ ಹಿನ್ನೆಲೆಯಲ್ಲಿ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಲು ಇಂದು ಸುತ್ತೂರು ಶ್ರೀಗಳು, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಡಾ.ಅಶ್ವತ್ಥ್​ನಾರಾಯಣ, ಆರ್.ಅಶೋಕ್, ಸಿ.ಪಿ.ಯೋಗೇಶ್ವರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು.

 

ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುತ್ತೂರು ಶ್ರೀಗಳು ಮಾತನಾಡಿ, ಈಗ ಆರೋಗ್ಯವಾಗಿದ್ದಾರೆ. ಲವಲವಿಕೆಯಿಂದಿದ್ದಾರೆ. ನಾನು ಹೋದಾಗ ಪೇಪರ್ ಓದುತ್ತಾ ಕುಳಿತಿದ್ದರು. ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಕೂಡ ಅಲ್ಲೇ ಇದ್ರು. ಡಾ.ಸತೀಶ್ ಚಂದ್ರ ಕೂಡ ಮೊದಲಿನಿಂದಲೂ ಪರಿಚಯ. ಕುಮಾರಸ್ವಾಮಿ ಆರೋಗ್ಯದಲ್ಲಿ ಏನು ತೊಂದರೆ ಇಲ್ಲ. ತುಂಬಾ ಹೊತ್ತು ಮಾತಾಡಿದ್ರು ಎಂದು ಹೇಳಿದರು.

ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಈಗ ತಾನೇ ಕುಮಾರಣ್ಣನನ್ನು ಭೇಟಿ ಮಾಡಿದೆ. ಅವರ ಕುಟುಂಬ ಕೂಡ ಜೊತೆಯಲ್ಲಿದ್ರು. ನನ್ನ ಜೊತೆ ರಾಜಕಾರಣ, ಬೇರೆ ಬೇರೆ ವಿಚಾರ ಚರ್ಚೆ ಮಾಡಿದ್ರು. ಕಂಫರ್ಟಬಲ್ ಆಗಿದ್ದಾರೆ. ನಾಳೆ ಅವರ ಮನೆಗೆ ಡಿಸ್ಚಾರ್ಜ್ ಆಗಿ ತೆರಳಲಿದ್ದಾರೆ. ಕುಮಾರಣ್ಣ ಅವರ ಮೈಂಡ್ ಸ್ಟ್ರೆಂತ್ ಚೆನ್ನಾಗಿದೆ. ದೇವರ ಆಶೀರ್ವಾದ ಇದೆ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಇದೆ. ಕುಮಾರಸ್ವಾಮಿ ರಾಜಕೀಯ ಜೀವನ ದೊಡ್ಡದಿದೆ. ಅವರಿಗೆ ಆರೋಗ್ಯ ಭಾಗ್ಯ ಕೊಡಲಿ ಎಂದರು.

ಕಾವೇರಿ ನೀರು ಬಿಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿದ ಅಶೋಕ್, ಕಾಂಗ್ರೆಸ್‌ನವರು ಏನೇ ಮಾಡಿದ್ರೂ ಓಟಿಗಾಗಿ ರಾಜಕಾರಣ ಮಾಡ್ತಿದ್ದಾರೆ. ಮೇಕೆದಾಟು ಯೋಜನೆಗೆ ಅಂತ ಪಾದಯಾತ್ರೆ ಮಾಡಿದ್ರು. ಬೇಡ ಅಂದ್ರೂ ಕೋವಿಡ್ ಕಾಲದಲ್ಲೂ ಪಾದಯಾತ್ರೆ ಮಾಡಿದರು. ಈಗ ಮೇಕೆನೂ ಇಲ್ಲ ದಾಟೂ ಇಲ್ಲ ಎಂದು ವ್ಯಂಗ್ಯವಾಡಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ