Breaking News

ಕನ್ನಡಿಯಲ್ಲಿ ಬಿಂಬ ನೋಡಿ ಗುಂಡು ಹೊಡೆಯುತ್ತಾರೆ ಕೊಡಗಿನ ಮಹಿಳೆ

Spread the love

ಮಡಿಕೇರಿ: ವಿಶಿಷ್ಟ ಹಬ್ಬ ಆಚರಣೆಗಳ, ಉಡುಗೆ ತೊಡುಗೆ ಮತ್ತು ಸಂಪ್ರದಾಯಗಳಿಂದ ಕೊಡಗು ದೇಶದ ಗಮನ ಸೆಳೆದಿದೆ. ಇಲ್ಲಿ ಮಕ್ಕಳು ಹುಟ್ಟಿದರೆ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಅಂತ್ಯಸಂಸ್ಕಾರದ ವೇಳೆ ಗುಂಡು ಹಾರಿಸಿ ಶೋಕ ವ್ಯಕ್ತಪಡಿಸಲಾಗುತ್ತದೆ. ಇನ್ನು ಹಬ್ಬ ಹರಿದಿನಗಳೆಂದರೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ಸಾಮಾನ್ಯ. ಅದರೆ ಕೊಡಗಿನ ಮಹಿಳೆಯೊಬ್ಬರು ಕನ್ನಡಿಯಲ್ಲಿ ಬಿಂಬ ನೋಡಿ ಹಿಮ್ಮುಖವಾಗಿ ಕೋವಿಯಿಂದ ಶೂಟ್ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿ ಸಮೀಪದ ದೇವಣಗೇರಿಯ ನಿವಾಸಿ ಡೀನಾ ಉತ್ತಪ್ಪ ಇಂತಹ ಸಾಧನೆ ಮಾಡಿರುವವರು. ಸಾಮಾನ್ಯವಾಗಿ ಮುಂದೆ ನೋಡಿಯೇ ಗುರಿತಪ್ಪದಂತೆ ಟಾರ್ಗೆಟ್ ಇಟ್ಟು ಶೂಟ್ ಮಾಡುವುದಕ್ಕೆ ಇಷ್ಟೋ ಜನರಿಗೆ ಸಾಧ್ಯವಾಗುವುದಿಲ್ಲ. ಆದರೆ ಮಹಿಳೆ ಡೀನಾ ಉತ್ತಪ್ಪ ಹಿಮ್ಮುಖವಾಗಿ ಗನ್ ಹೆಗಲೇರಿಸಿಕೊಂಡು ಕನ್ನಡಿಯಲ್ಲಿ ಟಾರ್ಗೆಟ್ ಇಟ್ಟಿರುವ ವಸ್ತುವಿನ ಬಿಂಬ ನೋಡುತ್ತಾ ಗುರಿ ತಪ್ಪದಂತೆ ಏರ್ ಗನ್ ನಿಂದ ಹಿಮ್ಮುಖವಾಗಿ ಶೂಟ್ ಮಾಡುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಗೃಹಿಣಿಯಾಗಿರುವ ಡೀನಾ ತಾವು ಪ್ರೌಢಶಾಲೆಯಲ್ಲಿದ್ದಾಗಲೇ ಏರ್ ಗನ್ ಶೂಟ್ ಮಾಡುತ್ತಿದ್ದರು. ವಿವಾಹವಾದ ಬಳಿಕ ಈ ಅಭ್ಯಾಸ ಕೈಬಿಟ್ಟಿದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ದಸರಾ ಸಂದರ್ಭದಲ್ಲಿ ಜಂಬೋ ಸರ್ಕಸ್ ನೋಡಲು ಹೋಗಿದ್ದರು. ಸರ್ಕಸ್ ನಲ್ಲಿ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು, ಹಿಮ್ಮುಖವಾಗಿ ಶೂಟ್ ಮಾಡಿದ್ದನ್ನು ನೋಡಿ ನಾನು ಏಕೆ ಇದನ್ನು ಪ್ರಯತ್ನಿಸಬಾರೆಂದು ಆಲೋಚಿಸಿ ಹಿಮ್ಮುಖವಾಗಿ ಶೂಟ್ ಮಾಡಲು ನಿರಂತರ ಪ್ರಯತ್ನಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಅದರಲ್ಲಿ ಸಕ್ಸಸ್ ಆಗಿದ್ದಾರೆ. ಆ ನಂತರವೂ ನಿರಂತರ ಪ್ರಯತ್ನದ ಫಲವಾಗಿ ಡೀನಾ ಅವರು ಈಗ ಕನ್ನಡಿಯಲ್ಲಿ ಟಾರ್ಗೆಟ್ ನ ಬಿಂಬ ನೋಡುತ್ತಾ ಹಿಮ್ಮುಖವಾಗಿ ಸಲೀಸಾಗಿ ಶೂಟ್ ಮಾಡುತ್ತಾರೆ.

ಹಿಮ್ಮುಖವಾಗಿ ಶೂಟ್ ಮಾಡಿದ್ದ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದನ್ನು ಗಮನಿಸಿದ್ದ ಕೊಡಗಿನ ಇನ್ನಿಬ್ಬರು ಯುವಕರು ಪ್ರಭಾವಿತರಾಗಿ ಅವರು ಕೂಡ ಹಿಮ್ಮುಖವಾಗಿ ಶೂಟ್ ಮಾಡುವುದನ್ನು ಅಭ್ಯಾಸಿಸಿದ್ದಾರೆ. ಈಗ ಹಿಮ್ಮುಖವಾಗಿ ಶೂಟ್ ಮಾಡುವುದು ಕೊಡಗಿನಲ್ಲಿ ಟ್ರೆಂಡ್ ಆಗಿ ಬೆಳೆಯುತ್ತಿದೆ. ಪತ್ನಿ ಡೀನಾ ಅವರ ಈ ಪ್ರಯತ್ನಕ್ಕೆ ಪತಿ ಉತ್ತಪ್ಪ ಕೂಡ ಸಾಥ್ ನೀಡುತ್ತಿದ್ದಾರೆ.


Spread the love

About Laxminews 24x7

Check Also

ಮುಳುಗಿದ ಲೋಳಸೂರ ಸೇತುವೆ: ಡಿಸಿ ಮೊಹಮ್ಮದ್ ರೋಷನ್ ಪರಿಶೀಲನೆ

Spread the loveಬೆಳಗಾವಿ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ‌ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ಇದೆ. ಇದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ