Home / ರಾಜಕೀಯ / ಎರಡು ತಿಂಗಳಿನಿಂದ ಆಭರಣದ ಸುಪರ್ದಿಗಾಗಿ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಕೊನೆಗೂ ಗೋಕಾಕ ತಾಲೂಕಾಡಳಿತದಿಂದ ಅಂತ್ಯ

ಎರಡು ತಿಂಗಳಿನಿಂದ ಆಭರಣದ ಸುಪರ್ದಿಗಾಗಿ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಕೊನೆಗೂ ಗೋಕಾಕ ತಾಲೂಕಾಡಳಿತದಿಂದ ಅಂತ್ಯ

Spread the love

ಎರಡು ತಿಂಗಳಿನಿಂದ ಆಭರಣದ ಸುಪರ್ದಿಗಾಗಿ ನಡುವೆ ನಡೆದಿದ್ದ ತಿಕ್ಕಾಟಕ್ಕೆ ಕೊನೆಗೂ ಗೋಕಾಕ ತಾಲೂಕಾಡಳಿತದಿಂದ ಅಂತ್ಯ ಕಾಣಿತು

ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮುಜರಾಯಿ ಇಲಾಖೆಯ ಆಧಿನದಲ್ಲಿರುವ ಕೊಣ್ಣೂರಿನ ಶ್ರೀಲಕ್ಷ್ಮೀ ದೇವಸ್ಥಾನದ ಅರ್ಚಕರ ಕುಟುಂಬ ಮತ್ತು ಕಮಿಟಿಯವರ ನಡುವೆ ದೇವಸ್ಥಾನದ ಆಭರಣಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ನಡೆದಿದ್ದ ಜಗಳವನ್ನು ಸಂಧಾನ ಮಾಡಲು ಹಲವಾರು ಬಾರಿ ಗೋಕಾಕ ತಹಸಿಲ್ದಾರ ಕೆ, ಮಂಜುನಾಥ
ಮತ್ತು ಪೋಲಿಸ್ ಅಧಿಕಾರಿಗಳು ಪ್ರಯತ್ನ ಪಟ್ಟರು ಸಹ ಹೊಂದಾಣಿಕೆ ಆಗದೆ ತಿಕ್ಕಾಟ ಮುಂದುವರೆದಿತ್ತು

ಇತ್ತ ಕಮಿಟಿಯವರು ಅರ್ಚಕರು ಕೇವಲ ಪೂಜೆಗೆ ಸಿಮಿತ ಅದಕ್ಕಾಗಿ ಆಭರಣಗಳನ್ನು ನಮ್ಮ ಸುಪರ್ದಿಗೆ ನೀಡಿ ಎಂದು ವಾದ ಮಾಡುತಿದ್ದರೆ, ದೇವಸ್ಥಾನಕ್ಕೆ ಇಷ್ಟೊಂದು ಆಭರಣ ಬರಲಿಕ್ಕೆ ಅರ್ಚಕರೆ ಕಾರಣ ಅದರ ಜೊತೆಯಲ್ಲಿ ದಿನಾಲು ಪೂಜೆಗೆ ಹಾಗೂ ದೇವಿಯ ಶೃಂಗಾರ ಮಾಡಲಿಕ್ಕೆ ನಮ್ಮ ಹತ್ತಿರ ಇರಬೇಕೆಂದು ವಾದ ಮಾಡುತಿದ್ದರು ಅಧಿಕಾರಿಗಳು ಹಲವಾರು ಬಾರಿ ಇಬ್ಬರಿಗೂ ಮನವೊಲಿಸಲು ಪ್ರಯತ್ನ ಪಟ್ಟರು ಇಬ್ಬರಲ್ಲಿ ಹೊಂದಾಣಿಕೆ ಆಗದ ಕಾರಣ ಈಗಾಗಲೆ ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರಿಂದ ಪೋಲಿಸ್ ಬಂದೊ ಬಸ್ತಿನಲ್ಲಿ ಎರಡು ತಿಂಗಳುಗಳಿಂದ ಬೀಗ ಹಾಕಿದ ಕೊಠಡಿಗಳ ಬಾಗಿಲು ತೆಗೆದು ದೇವಸ್ಥಾನದ ಆಬರಣಗಳನ್ನು ಎಲ್ಲರ ಉಪಸ್ಥಿತಿಯಲ್ಲಿ ಚಿನ್ನ ಬೆಳ್ಳಿಯನ್ನು ಸುಮಾರು 8 ಗಂಟೆಗಳ ಕಾಲ ಪರಿಶಿಲಿಸಿ ಲೆಕ್ಕಾಚಾರ ಮಾಡಿಸಿ ಸರಕಾರದ ಸುಪರ್ದಿಗೆ ತೆಗೆದುಕೊಂಡರು.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ