Home / ರಾಜಕೀಯ / ಟಿಕ್​ಟಾಕ್​ ಬ್ಯಾನ್​ ಮಾಡಿದ ನ್ಯೂಯಾರ್ಕ್ ಆಡಳಿತ.. ಕಾರಣ ಏನು ಗೊತ್ತೇ?

ಟಿಕ್​ಟಾಕ್​ ಬ್ಯಾನ್​ ಮಾಡಿದ ನ್ಯೂಯಾರ್ಕ್ ಆಡಳಿತ.. ಕಾರಣ ಏನು ಗೊತ್ತೇ?

Spread the love

ನ್ಯೂಯಾರ್ಕ್ ( ಅಮೆರಿಕ): ಸರ್ಕಾರಿ ಸ್ವಾಮ್ಯದ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ಬ್ಯಾನ್​ ಮಾಡಿ ನ್ಯೂಯಾರ್ಕ್​ ಆಡಳಿತ ಆದೇಶಿಸಿದೆ. ಭದ್ರತಾ ಕಾಳಜಿಯ ಕಾರಣದಿಂದಾಗಿ ಅಲ್ಲಿನ ಸ್ಥಳೀಯ ಆಡಳಿತ ಟಿಕ್​ಟಾಕ್ ನಿಷೇಧಿಸಿದೆ.

ಈ ಕಿರು ವಿಡಿಯೋ ಅಪ್ಲಿಕೇಶನ್‌ ಪ್ರವೇಶ ನಿರ್ಬಂಧಿಸಿರುವ 24 ರಾಜ್ಯಗಳ ಪಟ್ಟಿಗೆ ಈಗ ನ್ಯೂಯಾರ್ಕ್​ ರಾಜ್ಯ ಸಹ ಸೇರಿಕೊಂಡಿದೆ ಎಂದು ಅಮೆರಿಕ ಪ್ರಮುಖ ಪತ್ರಿಕೆ ವರದಿ ಮಾಡಿದೆ.

ಚೀನಾದ ಕಂಪನಿ ಬೈಟ್‌ಡ್ಯಾನ್ಸ್ ಒಡೆತನದ ಈ ಟಿಕ್​ಟಾಕ್ ಅಪ್ಲಿಕೇಶನ್​, ಬಳಕೆದಾರರ ಡೇಟಾಗೆ ಬೀಜಿಂಗ್ ಪ್ರವೇಶ ಮಾಡಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ನ್ಯೂಯಾರ್ಕ್​ನ ರಾಜ್ಯಾಡಳಿತ ಈ ಕ್ರಮ ಕೈಗೊಂಡಿದೆ. ನ್ಯೂಯಾರ್ಕ್​ನ ಮೇಯರ್ ಎರಿಕ್ ಆಡಮ್ಸ್ ಅವರ ವಕ್ತಾರ ಜೋನಾ ಅಲನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರದ ಸೈಬರ್ ಕಮಾಂಡ್ ಶಿಫಾರಿಸಿನ ಅನ್ವಯ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿರುವ ಅವರು, ನಗರದ ತಾಂತ್ರಿಕ ನೆಟ್‌ವರ್ಕ್‌ಗಳಿಗೆ ಭದ್ರತಾ ಬೆದರಿಕೆ ಇದೆ. ಹೀಗಾಗಿ ಈ ಅಪ್ಲಿಕೇಶನ್ ಬಳಕೆ ತಡೆ ಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.

ಇಲ್ಲಿನ ಎಲ್ಲ ಏಜೆನ್ಸಿಗಳು 30 ದಿನಗಳ ಒಳಗೆ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಅನ್​ ಇನ್​​​ಸ್ಟಾಲ್ ಮಾಡಬೇಕು ಎಂದು ಸೂಚಿಸಿದೆ. ಉದ್ಯೋಗಿಗಳು ಸರ್ಕಾರ ಒದಗಿಸಿರುವ ಮೊಬೈಲ್​​ ಸಾಧನಗಳು ಮತ್ತು ನೆಟ್‌ವರ್ಕ್‌ಗಳಿಂದ TikTok ಮತ್ತು ಅದರ ವೆಬ್‌ಸೈಟ್‌ಗೆ ಪ್ರವೇಶವನ್ನು ನೀಡಲು ಇನ್ಮುಂದೆ ಸಾಧ್ಯವಾಗುವುದಿಲ್ಲ ಎಂದು ನ್ಯೂ ಯಾರ್ಕ್​ ಆಡಳಿತ ತನ್ನ ಆದೇಶದಲ್ಲಿ ತಿಳಿಸಿದೆ. ನ್ಯೂಯಾರ್ಕ್ ರಾಜ್ಯಾಡಳಿತ ಕೆಲವು ವಿನಾಯಿತಿಗಳೊಂದಿಗೆ ಮೂರು ವರ್ಷಗಳಿಗೂ ಹೆಚ್ಚು ಕಾಲ TikTok ನಿಷೇಧಿಸಿ ಆದೇಶಿಸಿದೆ.

ಎಲ್ಲೆಲ್ಲಿ ನಿಷೇಧ: ನಗರದ ನೈರ್ಮಲ್ಯ ಇಲಾಖೆ, ಉದ್ಯಾನ ಮತ್ತು ಮನರಂಜನಾ ಇಲಾಖೆ, ರಾಜ್ಯಾಡಳಿತದ ಆದೇಶದೊಂದಿಗೆ ತಮ್ಮ ಬಯೋವನ್ನು ನವೀಕರಿಸಿದೆ. ಟಿಕ್​ ಟಾಕ್​​ ಖಾತೆಯನ್ನು ಆಗಸ್ಟ್ 2023 ರವರೆಗೆ ಮಾತ್ರವೇ ಕಾರ್ಯನಿರ್ವಹಿಸುತ್ತದೆ. ಆ ಬಳಿಕ ಈ ಅಪ್ಲಿಕೇಷನ್​ ಕಾರ್ಯ ನಿರ್ವಹಣೆ ಮಾಡುವುದಿಲ್ಲ ಎಂದು ಅಲ್ಲಿನ ಪ್ರಮುಖ ಪತ್ರಿಕೆ ವರದಿ ಮಾಡಿದೆ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ