ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಅವರು ಭಾರತೀಯ ತಂಡದ ಆಟಗಾರರಿಗೆ ತಮ್ಮ ಕೌಶಲ್ಯವನ್ನು ಸುಧಾರಿಸಲು ಸಲಹೆ ನೀಡಿದ್ದಾರೆ ಮತ್ತು ಕ್ಯಾಪ್ಟನ್ ಹಾರ್ದಿಕ್ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಲಾಡರ್ಹಿಲ್, ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಕಂಡಿತು.
ಪಂದ್ಯ ಹಾಗೂ ಸರಣಿ ಸೋತ ಬಳಿಕ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ನೀಡಿರುವ ಹೇಳಿಕೆ ಟೀಕೆಗೆ ಗುರಿಯಾಗುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು T20 ಗಳನ್ನು ಸೋತ ನಂತರ ಮತ್ತು ಸರಣಿ ರೇಸ್‌ನಲ್ಲಿ ಹಿಂದೆ ಬಿದ್ದ ಭಾರತ ತಂಡ ಚೇತರಿಸಿಕೊಂಡಿತ್ತು. ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿತ್ತು. ಆದ್ರೆ ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ-20 ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಸೋಲನ್ನು ಕಂಡಿತು. ಈ ಸೋಲಿನಿಂದಾಗಿ ಭಾರತ ತಂಡ ಟಿ20 ಸರಣಿಯನ್ನು 2-3 ರಿಂದ ಕಳೆದುಕೊಂಡಿದೆ. ಟಿ20 ಸರಣಿ ಸೋಲಿನ ಬಳಿಕ ಟೀಂ ಇಂಡಿಯಾದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಸಾದ್ ಅವರು, ಭಾರತೀಯ ತಂಡದ ಆಟಗಾರರಿಗೆ ತಮ್ಮ ಕೌಶಲ್ಯವನ್ನು ಸುಧಾರಿಸಲು ಸಲಹೆ ನೀಡಿದ್ದಾರೆ ಮತ್ತು ಕ್ಯಾಪ್ಟನ್ ಹಾರ್ದಿಕ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.